ಅಮೆರಿಕದಲ್ಲಿ ವಿಶಿಷ್ಟ ವಿವಾಹವೊಂದು ನಡೆದಿದೆ. ಹೊಸ ಬಾಳಿಗೆ ಅಡಿಯಿಡುವ ಮುನ್ನ ವಧು ತನ್ನ ತಂದೆಯ ಹೃದಯ ಸ್ವೀಕರಿಸಿದ್ದ ವ್ಯಕ್ತಿಯನ್ನು ಭೇಟಿ ಮಾಡಿದ್ದಾಳೆ.
ತನ್ನ ತಂದೆಯ ಹೃದಯವನ್ನು ಟಾಮ್ ಥಾಮಸ್ ಎಂಬುವವರಿಗೆ ಅಳವಡಿಸಲಾಗಿದೆ ಅನ್ನೋದು ಜೆನಿ ಸ್ಟೆಪಿನ್ ಗೆ ಗೊತ್ತಿತ್ತು. ಆದ್ರೆ ಅವರ ಭೇಟಿಗೆ ಕಾಲ ಕೂಡಿ ಬಂದಿರಲಿಲ್ಲ. ವಿವಾಹಕ್ಕೂ ಮುನ್ನ ಟಾಮ್ ಥಾಮಸ್ ಅವರ ಆಶೀರ್ವಾದ ಪಡೆಯಬೇಕೆಂದು ನಿರ್ಧರಿಸಿದ ಜೆನಿ, ಅವರನ್ನು ಮದುವೆ ಸಮಾರಂಭಕ್ಕೆ ಆಹ್ವಾನಿಸಿದ್ಲು.
ವಿವಾಹಕ್ಕೂ ಮುನ್ನ ಟಾಮ್ ಅವರ ಎದೆ ಮೇಲೆ ಕೈಯಿಟ್ಟು ಹೃದಯ ಬಡಿತವನ್ನು ಆಲಿಸಿದ ಜೆನಿ ತನ್ನ ತಂದೆ ಇನ್ನೂ ಬದುಕಿದ್ದಾರೆಂಬ ಸಂತೋಷವನ್ನು ಅನುಭವಿಸಿದ್ದಾಳೆ. ಅವರ ಆಶೀರ್ವಾದ ಪಡೆದು ಜೆನಿ ಹಾಗೂ ಪೌಲ್ ಮೈಯ್ನರ್ ವಿವಾಹ ಬಂಧನಕ್ಕೊಳಗಾದ್ರು. 2006 ರಲ್ಲಿ ಜೆನಿ ತಂದೆ ಮೈಕೆಲ್ ದರೋಡೆಕೋರರ ಗುಂಡೇಟಿಗೆ ಬಲಿಯಾಗಿದ್ದರು. ಅವರ ಹೃದಯವನ್ನು ಟಾಮ್ ಥಾಮಸ್ ಅವರಿಗೆ ಅಳವಡಿಸಲಾಗಿತ್ತು.