ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳು ಅನಿವಾರ್ಯ ಎನ್ನುವಂತೆ ಹಾಸುಹೊಕ್ಕಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಇನ್ನುಮುಂದೆ ವಾಟ್ಸಾಪ್ ನಲ್ಲಿ ನೀವು ವಿಡಿಯೋ ಕಾಲಿಂಗ್ ಮಾಡಬಹುದಾಗಿದೆ. ಅಂಡ್ರಾಯಿಡ್ ಫೋನ್ ಗಳಲ್ಲಿ ನೂತನ ಬೀಟಾ ಆವೃತ್ತಿಗಳಲ್ಲಿ ವಾಟ್ಸಾಪ್ ವಿಡಿಯೋ ಕಾಲಿಂಗ್ ಮಾಡುವ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ತಯಾರಿ ನಡೆಸಲಾಗಿದೆ. ಫೇಸ್ ಬುಕ್ ಇನ್ ಸ್ಟಂಟ್ ಮೆಸೆಂಜರ್ ನಲ್ಲಿ ಮೊದಲಿಗೆ ಈ ಕುರಿತಂತೆ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು.
ಇದೀಗ ವಾಟ್ಸಾಪ್, ಗೂಗಲ್ ಪ್ಲೇ ನಲ್ಲಿ ಸದ್ದಿಲ್ಲದೇ ಬೀಟಾ ಟೆಸ್ಟಿಂಗ್ ನಡೆಸಿದೆ. ವಾಟ್ಸಾಪ್ ವಿಡಿಯೋ ಕಾಲಿಂಗ್ ಸಿಸ್ಟಂ ಜಾರಿಗೆ ತರುವ ಜವಾಬ್ದಾರಿಯನ್ನು ಜರ್ಮನಿಯ ಮೆಸೆರ್ ಕೊಫ್ ವೆಬ್ ಸೈಟ್ ವಹಿಸಿಕೊಂಡಿದೆ. ಮೊದಲಿಗೆ ಆಪಲ್ ಓ.ಎಸ್. ಫೋನ್ ಗಳಲ್ಲಿ ಈ ಸೌಲಭ್ಯ ಸಿಗಲಿದ್ದು, ನಂತರ ವಿಸ್ತರಣೆಯಾಗಲಿದೆ ಎನ್ನಲಾಗಿದೆ.