ಟೀಮ್ ಇಂಡಿಯಾ ಆಟಗಾರ ಹಾಗೂ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಈಗ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾ ಜೊತೆಗಿರಬೇಕೆಂಬ ಕಾರಣಕ್ಕಾಗಿಯೇ ಅವರು ಅಮ್ಸ್ಟರ್ಡಂಗೆ ಹೋಗಿದ್ದಾರೆ.
ಪತ್ನಿ ಪ್ರಿಯಾಂಕಾ ಜೊತೆಗಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಸುರೇಶ್ ರೈನಾ, ತಮಗೆ ಹೆಣ್ಣು ಮಗು ಹುಟ್ಟಿದ ಸಂತಸವನ್ನು ಹಂಚಿಕೊಂಡಿದ್ದರು.
ಇದೀಗ ತಮ್ಮ ಮಗುವಿನ ಚಿತ್ರವನ್ನು ಪೋಸ್ಟ್ ಮಾಡಿರುವ ಸುರೇಶ್ ರೈನಾ, ತಮ್ಮ ಮಗಳಿಗೆ ಗ್ರೇಸಿಯಾ ಎಂಬ ಹೆಸರನ್ನಿಡಲು ತೀರ್ಮಾನಿಸಿದ್ದಾರೆನ್ನಲಾಗಿದೆ.
ಕಳೆದ ವರ್ಷದ ಏಪ್ರಿಲ್ ನಲ್ಲಿ ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕಾ ಕೈ ಹಿಡಿದಿದ್ದ ಸುರೇಶ್ ರೈನಾ, ಪತ್ನಿ ಪ್ರಿಯಾಂಕಾ, ಡೆಲಿವರಿಗೆಂದು ಅಮ್ಸ್ಟರ್ಡಂ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಐಪಿಎಲ್ ಪಂದ್ಯ ತೊರೆದು ಅಲ್ಲಿಗೆ ತೆರಳಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯ ಮಿಸ್ ಮಾಡಿಕೊಂಡಿದ್ದ ಸುರೇಶ್ ರೈನಾ, ಭಾರತಕ್ಕೆ ಮರಳಲಿದ್ದು, ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.