ಬೆಂಗಳೂರು: ಕೆಲವು ಹೆಣ್ಣುಮಕ್ಕಳಿಗೆ ಇರುವುದೆಲ್ಲವ ಬಿಟ್ಟು, ಇಲ್ಲದಿರುವ ಕಡೆಗೆ ಹೋಗುವ ಆಸೆ ಇತ್ತೀಚೆಗೆ ಹೆಚ್ಚಾದಂತಿದೆ. ಮದುವೆಯಾಗಿ ಗಂಡನೊಂದಿಗೆ ಸುಖವಾಗಿದ್ದ ಆಕೆಗೆ ಅದೇನಾಯ್ತೋ ಬೇರೆ ಮದುವೆಯಾಗಿದ್ದಾಳೆ.
ಈಗ ಎರಡನೇ ಗಂಡನೂ ಉಲ್ಟಾ ಹೊಡೆದಿದ್ದಾನೆ. ಬೆಂಗಳೂರಿನ ನಿವಾಸಿಯಾಗಿದ್ದ ಮಹಿಳೆಗೆ ಈ ಮೊದಲೇ ಮದುವೆಯಾಗಿತ್ತು. ಆ ನಂತರದಲ್ಲಿ ಬಾಲ್ಯ ಸ್ನೇಹಿತನೊಂದಿಗೆ ಸಲುಗೆ ಬೆಳೆದಿದೆ. ಈಕೆಗೆ ವಿಚ್ಛೇದನ ಕೊಡಿಸಿದ ಸ್ನೇಹಿತ ಆಕೆಯನ್ನು ಮದುವೆಯಾಗಿದ್ದಾನೆ. ನಂತರದಲ್ಲಿ ಇಬ್ಬರೂ ಸುಖವಾಗಿ ಸಂಸಾರ ಮಾಡಿದ್ದಾರೆ. ಆ ನಂತರದಲ್ಲಿ ಬೇರೆ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿದ ಸ್ನೇಹಿತ ಈಕೆಯನ್ನು ಕೈಬಿಟ್ಟಿದ್ದಾನೆ.
ಈಕೆಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾನೆ ಎನ್ನಲಾಗಿದ್ದು, ಸಂಘಟನೆಯೊಂದರ ನೆರವಿನಿಂದ ಮಹಿಳೆ ನ್ಯಾಯಕ್ಕಾಗಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಹೇಳಲಾಗಿದೆ.