Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಪತ್ರಿಕೆಯಲ್ಲಿ ಟ್ರಂಪ್ ಪತ್ನಿಯ ನಗ್ನ ಫೋಟೋ ಪ್ರಕಟ

$
0
0
ಪತ್ರಿಕೆಯಲ್ಲಿ ಟ್ರಂಪ್ ಪತ್ನಿಯ ನಗ್ನ ಫೋಟೋ ಪ್ರಕಟ

ಅಮೆರಿಕ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿರುವ ಡೋನಾಲ್ಡ್ ಟ್ರಂಪ್ ಅವರಿಗೆ ನಿಜಕ್ಕೂ ಇದು ಆಘಾತಕಾರಿ ಸುದ್ದಿ. ಅವರ ಪತ್ನಿ ಮೆಲಾನಿಯಾ ಟ್ರಂಪ್ ರ ನಗ್ನ ಫೋಟೋಗಳು ನ್ಯೂಯಾರ್ಕ್ ನ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿವೆ.

ಮೆಲಾನಿಯಾ ಟ್ರಂಪ್ ಜನಪ್ರಿಯ ಮಾಡೆಲ್. 1995ರಲ್ಲಿ ಮ್ಯಾನ್ಹಾಟನ್ ನಲ್ಲಿ ನಡೆದ ಮಾಡೆಲಿಂಗ್ ಸೆಶನ್ ಒಂದರಲ್ಲಿ ಈ ಫೋಟೋಗಳನ್ನು ತೆಗೆಯಲಾಗಿದ್ದು, ಅಷ್ಟೇ ಅಲ್ಲ ನಗ್ನ ಚಿತ್ರಗಳು ಫ್ರೆಂಚ್ ಮ್ಯಾಗಝೀನ್ ಮ್ಯಾಕ್ಸ್ ನಲ್ಲಿ ಪ್ರಕಟವಾಗಿದ್ದವು ಅಂತಾ ಪತ್ರಿಕೆ ವರದಿ ಮಾಡಿದೆ.

ನನಗೆ ಮೆಲಾನಿಯಾ ಪರಿಚಯವಾಗುವ ಮುನ್ನವೇ ಯುರೋಪ್ ನ ಮ್ಯಾಗಝೀನ್ ಒಂದಕ್ಕಾಗಿ ತೆಗೆದ ಚಿತ್ರಗಳಿವು. ಯುರೋಪ್ ನಲ್ಲಿ ಇದೆಲ್ಲಾ ಕಾಮನ್ ಎನ್ನುವ ಮೂಲಕ ಡೋನಾಲ್ಡ್ ಟ್ರಂಪ್ ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮೆಲಾನಿಯಾಗೆ ಈಗ 46 ರ ಹರೆಯ. 2005 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಡೋನಾಲ್ಡ್ ಟ್ರಂಪ್ ರನ್ನು ಮೆಲಾನಿಯಾ ವಿವಾಹವಾಗಿದ್ರು.

ಡೋನಾಲ್ಡ್ ಟ್ರಂಪ್ ಈಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾರೆ. ಈ ಸಮಯದಲ್ಲೇ ಪತ್ನಿಯ ನಗ್ನ ಫೋಟೋಗಳು ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಅವರಿಗೆ ಮುಜುಗರ ತಂದಿದೆ. ಆದ್ರೆ ಪಡ್ಡೆಗಳು ಮಾತ್ರ ಪತ್ರಿಕೆ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>