ಮುಂಬೈ: ಬಿಸ್ಕೆಟ್ ಎಂದ ಕೂಡಲೇ, ಸಾಮಾನ್ಯವಾಗಿ ನೆನಪಿಗೆ ಬರುವುದು ಪಾರ್ಲೆ-ಜಿ. ಹಿಂದೆಲ್ಲಾ ಪಾರ್ಲೆ-ಜಿ ಬಿಸ್ಕೆಟ್ ಭಾರೀ ಜನಪ್ರಿಯವಾಗಿತ್ತು. ಸುಮಾರು 87 ವರ್ಷಗಳಿಂದ ಮನೆಮಾತಾಗಿದ್ದ ಮುಂಬೈನ ಪಾರ್ಲೆ-ಜಿ ಫ್ಯಾಕ್ಟರಿ ಬಂದ್ ಆಗಲಿದೆ.
ಗ್ಲುಕೋಸ್ ಬಿಸ್ಕೆಟ್ ಎಂದೇ ಜನಸಾಮಾನ್ಯರ ಭಾಷೆಯಲ್ಲಿ ಕರೆಯಲ್ಪಡುತ್ತಿದ್ದ ಬಿಸ್ಕೆಟ್ ಅನ್ನು, ಜನ ಸಾಮಾನ್ಯರು ಹಿಂದೆ ಹೆಚ್ಚಾಗಿ ಬಳಸುತ್ತಿದ್ದರು. 1929 ರಿಂದ ಪಾರ್ಲೆ ಗ್ಲೂಕೊ ಹೆಸರಿನಲ್ಲಿ ಮುಂಬೈನಲ್ಲಿ ಬಿಸ್ಕೆಟ್ ಉತ್ಪಾದಿಸಲಾಗುತ್ತಿದ್ದು, 1980ರ ಸುಮಾರಿಗೆ ಪಾರ್ಲೆ-ಜಿ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಿತ್ತು. ಮುಂಬೈ ಫ್ಯಾಕ್ಟರಿಯಲ್ಲಿ ಪ್ರತಿದಿನ ಸುಮಾರು 40 ಕೋಟಿ ಬಿಸ್ಕೆಟ್ ಉತ್ಪಾದಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ನಾನಾ ರೀತಿಯ ಬಿಸ್ಕೆಟ್ ಲಗ್ಗೆ ಇಟ್ಟಿದ್ದು, ಮಾರುಕಟ್ಟೆಯಲ್ಲಿನ ಪ್ರಬಲ ಪೈಪೋಟಿ ಎದುರಿಸುವಲ್ಲಿ ಕಂಪನಿ ವಿಫಲವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದಾಗಿ ಕಂಪನಿಯನ್ನು ಮುಚ್ಚಲು ಮಾಲೀಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.