ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಸಲು ಇನ್ನು ಮುಂದೆ ಡೇಟಾ ಪ್ಯಾಕ್ ಹಾಕಿಸಬೇಕಾಗಿಲ್ಲ. ಬಳಕೆದಾರರಿಗೆ ಅನುಕೂಲವಾಗುವ ಸಲುವಾಗಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಫೇಸ್ ಬುಕ್ ಲಭ್ಯವಾಗುವಂತೆ ಮಾಡಲಾಗಿದೆ.
ಹೌದು. ಫೇಸ್ ಬುಕ್ ಇಂಡಿಯಾ ಈಗ Fonetwish ಸಹಯೋಗದೊಂದಿಗೆ ಬಳಕೆದಾರರಿಗೆ ಈ ಸೌಲಭ್ಯ ನೀಡುತ್ತಿದೆ. ಇದಕ್ಕಾಗಿ ಸ್ಮಾರ್ಟ್ ಫೋನ್ ನಿಂದ *325# ಗೆ ಡಯಲ್ ಮಾಡಿ ಫೇಸ್ ಬುಕ್ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಬೇಕಾಗುತ್ತದೆ.
ಬಳಕೆದಾರರು ತಮ್ಮ ಫೇಸ್ ಬುಕ್ ಸ್ಟೇಟಸ್ ಅಪ್ ಮಾಡುವುದರ ಜೊತೆಗೆ ಪೋಸ್ಟ್ ಗಳನ್ನು ವೀಕ್ಷಿಸಬಹುದಾಗಿದೆ. ಆದರೆ ಪೋಸ್ಟ್ ಮಾಡಲು, ನೋಟಿಫಿಕೇಶನ್ ಚೆಕ್ ಮಾಡಲು ಹಾಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ದಿನಂಪ್ರತಿ 1 ರೂ. ಪಾವತಿಸುವ ಮೂಲಕ ಅನಿಯಮಿತವಾಗಿ ಫೇಸ್ ಬುಕ್ ಬಳಸಬಹುದಾಗಿದೆ. ಸದ್ಯಕ್ಕೆ ಏರ್ ಟೆಲ್, ಏರ್ ಸೆಲ್, ಐಡಿಯಾ ಹಾಗೂ ಟಾಟಾ ಡೊಕೊಮಾ ಗ್ರಾಹಕರಿಗೆ ಇದು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ಕಂಪನಿಯ ಮೊಬೈಲ್ ಗ್ರಾಹಕರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.