ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಹತ್ಯೆ ಕುರಿತ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಕ್ವಂಡೇಲ್ ಬಲೋಚ್ ಳನ್ನು ಕುಟುಂಬ ಗೌರವದ ಹೆಸರಿನಲ್ಲಿ ಆಕೆಯ ಸಹೋದರ ಮಹಮ್ಮದ್ ವಾಸೀಂ ಹತ್ಯೆ ಮಾಡಿದ್ದಾನೆಂದು ಇದುವರೆಗೂ ಭಾವಿಸಲಾಗಿತ್ತಾದರೂ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಬೇರೊಂದು ವಿಚಾರ ಹೊರ ಬಿದ್ದಿದೆ.
ಕ್ವಂಡೇಲ್ ಬಲೋಚ್ ಳನ್ನು ಆಕೆಯ ಸಹೋದರ ಮಹಮ್ಮದ್ ವಾಸೀಂ ಹತ್ಯೆ ಮಾಡಿಲ್ಲ. ಬದಲಾಗಿ ಆಕೆಯ ಸಹೋದರ ಸಂಬಂಧಿ ಹಕ್ ನವಾಜ್ ಹತ್ಯೆ ಮಾಡಿರುವ ಅಂಶ, ಆರೋಪಿಗಳಿಗೆ ಪೊಲೀಸರು ಪಾಲಿಗ್ರಾಫ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಸೌದಿ ಅರೇಬಿಯಾದಲ್ಲಿರುವ ಕ್ವಂಡೇಲ್ ಬಲೋಚ್ ಳ ಹಿರಿಯ ಸಹೋದರ ಆರೀಫ್, ತನ್ನ ಅರೆ ಬೆತ್ತಲೆ ವಿಡಿಯೋ ಮೂಲಕ ಕುಟುಂಬದ ಗೌರವ ಕಳೆಯುತ್ತಿದ್ದಾಳೆಂಬ ಕಾರಣಕ್ಕೆ ಹತ್ಯೆ ಮಾಡಲು ಕುಮ್ಮಕ್ಕು ನೀಡಿದ್ದನೆಂಬ ಅಂಶವೂ ಈ ವೇಳೆ ತಿಳಿದುಬಂದಿದೆ. ಆತನ ಅಣತಿಯಂತೆ ಮಹಮ್ಮದ್ ವಾಸೀಂ ಕ್ವಂಡೇಲ್ ಬಲೋಚ್ ಗೆ ಡ್ರಗ್ಸ್ ನೀಡಿದ್ದು, ಆಕೆ ನಿದ್ರೆಗೆ ಜಾರಿದಾಗ ಸಹೋದರ ಸಂಬಂಧಿ ಹಕ್ ನವಾಜ್ ಚೂರಿಯಿಂದ ಇರಿದಿದ್ದಾನೆನ್ನಲಾಗಿದೆ. ಆಕೆ ಒದ್ದಾಡದಂತೆ ಮಹಮ್ಮದ್ ವಾಸೀಂ ಕೈ, ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಹತ್ಯೆಗೆ ಸಹಕರಿಸಿರುವುದು ಪಾಲಿಗ್ರಾಫ್ ಪರೀಕ್ಷೆ ವೇಳೆ ತಿಳಿದುಬಂದಿದೆ.