ಜಗತ್ತಿನಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಪ್ರಕೃತಿಯ ವಿಸ್ಮಯಕ್ಕೆ ಮನುಷ್ಯ ಆಶ್ಚರ್ಯಚಕಿತನಾಗಿದ್ದಾನೆ. ಹಿಂದಿನ ವರ್ಷ ಹಾಂಕಾಂಗ್ ನಲ್ಲಿ ಎಲ್ಲರೂ ಆಶ್ಚರ್ಯಪಡುವಂತಹ ಒಂದು ಘಟನೆ ನಡೆದಿತ್ತು. ಈಗಷ್ಟೇ ಜನಿಸಿದ ಮಗುವಿನ ಹೊಟ್ಟೆಯಲ್ಲಿ ಅವಳಿ ಭ್ರೂಣ ಬೆಳೆಯುತ್ತಿತ್ತು.
ಯಸ್, ಇದು ಸತ್ಯ. ಹುಟ್ಟಿದ ಮಗುವಿನ ಹೊಟ್ಟೆ ದೊಡ್ಡದಾಗಿತ್ತು. ಇದನ್ನು ನೋಡಿದ ವೈದ್ಯರು ಮಗುವಿನ ಹೊಟ್ಟೆಯಲ್ಲಿ ಟ್ಯೂಮರ್ ಆಗಿದೆ. ಹಾಗಾಗಿ ಹೊಟ್ಟೆ ದೊಡ್ಡದಾಗಿದೆ ಎಂದುಕೊಂಡಿದ್ದರು. ಆದ್ರೆ ಪರೀಕ್ಷೆ ನಡೆಸಿದಾಗ ಆಶ್ಚರ್ಯ ಕಾದಿತ್ತು. ಮಗುವಿನ ಹೊಟ್ಟೆಯಲ್ಲಿ ಯಾವುದೇ ಟ್ಯೂಮರ್ ಇರಲಿಲ್ಲ. ಬದಲಾಗಿ ಅವಳಿ ಶಿಶು ಬೆಳೆಯುತ್ತಿತ್ತು.
ಮಗುವಿನ ಹೊಟ್ಟೆಯಲ್ಲಿರುವ ಅವಳಿ ಭ್ರೂಣಗಳು ಆರೋಗ್ಯವಾಗಿ ಬೆಳೆಯುತ್ತಿದ್ದವು. ಅವುಗಳ ಕೈ,ಕಾಲು ಬೆಳವಣಿಗೆ ಹೊಂದಿತ್ತು. ಭ್ರೂಣಕ್ಕೆ ಬೇಕಾಗುವ ಎಲ್ಲ ಪೌಷ್ಠಿಕಾಂಶಗಳು ಸಿಗುತ್ತಿದ್ದವು. ಮಗುವಿನ ಹೊಟ್ಟೆಯಲ್ಲಿ 8-10 ವಾರಗಳ ಶಿಶುವಿದೆ ಎಂದು ವೈದ್ಯರು ಹೇಳಿದ್ದರು. ಇದನ್ನು ಭ್ರೂಣದ ಭ್ರೂಣ ಎಂದು ಕರೆಯಲಾಗುತ್ತದೆಯಂತೆ. ಸುಮಾರು 50 ಲಕ್ಷ ಮಕ್ಕಳಲ್ಲಿ ಒಂದು ಮಗುವಿನಲ್ಲಿ ಈ ರೀತಿಯಾಗುತ್ತದೆಯಂತೆ.