7 ವರ್ಷದ ಕಠಿಣ ಪರಿಶ್ರಮದ ನಂತರ ಚೀನಾ, ಪ್ರಪಂಚದ ಅತಿದೊಡ್ಡ ಸಮುದ್ರ ವಿಮಾನ ಎಜಿ 600 ಅನ್ನು ತಯಾರಿಸಿದೆ. ಇದನ್ನು ಚೀನಾ, ಸಮುದ್ರದ ರೆಸ್ಕ್ಯೂ ಕಾರ್ಯಾಚರಣೆಗೆ ಮತ್ತು ಬೆಂಕಿ ಆರಿಸಲು ಬಳಸಿಕೊಳ್ಳಲಿದೆ.
ಈ ಸಮುದ್ರ ವಿಮಾನವನ್ನು ಏರ್ ಕ್ರಾಫ್ಟ್ ಕಂಪನಿ ಏವಿಯೇಶನ್ ಇಂಡಸ್ಟ್ರಿ ಕಾರ್ಪೊರೇಶನ್ ಆಫ್ ಚೈನಾ (ಎವಿಐಸಿ) ತಯಾರಿಸಿದೆ. ಬೋಯಿಂಗ್ 737 ನಷ್ಟು ದೊಡ್ಡದಾಗಿರುವ ಇದು ಆಕಾಶದಲ್ಲಿ ಹಾರುವ ಸಾಮರ್ಥ್ಯ ಮತ್ತು ನೀರಿನಲ್ಲಿ ಚಲಿಸುವ ಸಾಮರ್ಥ್ಯ ಎರಡನ್ನೂ ಹೊಂದಿದೆ.
ಎಜಿ 600, 4500 ಕಿ.ಮೀ. ತನಕ ಹಾರಬಲ್ಲದು. ಇದು 53.5 ಟನ್ ತೂಕ ಹೊರುವ ಮತ್ತು 20 ಸೆಕೆಂಡ್ ಗೆ 12 ಟನ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.