ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಅಪರೂಪದ ಜೀವಿ ಪೆಂಗೊಲಿನ್ ಬಿಹಾರದ ಕಿಶನಜಂಗ್ ಜಿಲ್ಲೆಯಲ್ಲಿ ಕಂಡುಬಂದಿದೆ. ಈ ಅಪರೂಪದ ಜೀವಿಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದು ಯಾವ ಜಾತಿಗೆ ಸೇರಿದ ಪ್ರಾಣಿ ಎಂಬುದನ್ನೂ ಅವರಿಗೆ ಊಹಿಸಲಾಗಲಿಲ್ಲ.
ಪೆಂಗೊಲಿನ್ ಅನ್ನು ನೋಡಿದ ವನ್ಯ ಜೀವಿ ರಕ್ಷಣಾ ಸಿಬ್ಬಂದಿ ಇದನ್ನು ಪಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನಕ್ಕೆ ಸೇರಿಸಿದ್ದಾರೆ. ಈ ಜೀವಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ. ಚೀನಾ, ಥೈಲೆಂಡಿನಲ್ಲಿ ಇದರ ಬೆಲೆ ಲಕ್ಷಗಟ್ಟಲೆ ಇದೆ. ಅವರು ಇದನ್ನು ನಪುಂಸಕತೆಯನ್ನು ಹೋಗಲಾಡಿಸಲು ಮತ್ತು ಜನನೇಂದ್ರಿಯದ ವರ್ಧನೆಯ ಔಷಧಗಳನ್ನು ತಯಾರಿಸಲು ಬಳಸುತ್ತಾರೆ. ಭಾರತದಲ್ಲಿ ಇದರ ಬೆಲೆ 20 ಸಾವಿರ ಎನ್ನಲಾಗಿದೆ.
ಪೆಂಗೊಲಿನ್ ನಲ್ಲಿ ಏಳು ರೀತಿಯ ಪ್ರಬೇಧಗಳಿವೆ. ಇವು ತಮಗೆ ಏನಾದರೂ ಅಪಾಯ ಒದಗಲಿದೆ ಎಂದು ತಿಳಿದಾಕ್ಷಣ ತಮ್ಮ ಶರೀರವನ್ನು ಭೂಮಿಗೆ ಸಮನಾಂತರವಾಗಿಟ್ಟುಕೊಳ್ಳುತ್ತವೆ. ಸಾಮಾನ್ಯವಾಗಿ ಇವು ಬಾಂಗ್ಲಾದೇಶ, ಚೀನಾ, ಭಾರತ, ಮಯನ್ಮಾರ್, ನೇಪಾಳ, ಥೈವಾನ್, ಥೈಲೆಂಡ್ ಮತ್ತು ವಿಯೆಟ್ನಾಂ ಗಳಲ್ಲಿ ಕಾಣಸಿಗುತ್ತವೆ.