ಸಾಮಾನ್ಯವಾಗಿ LKG, UKG ಓದುವ ಮಕ್ಕಳು ಗೊಂಬೆಗಳೊಂದಿಗೆ ಆಟವಾಡುತ್ತಲೋ ಅಥವಾ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತಲೋ ಕಾಲ ಕಳೆಯುತ್ತಾರೆ. ಆದರೆ ಈ ಬಾಲಕ ಮಾತ್ರ ಅದಕ್ಕೆ ತದ್ವಿರುದ್ಧ. ನಾಲ್ಕನೇ ವರ್ಷದಲ್ಲಿಯೇ ಈತ 12 ವರ್ಷದೊಳಗಿನ ಶಾಲಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ.
ದೆಹಲಿಯ ಶಯಾನ್ ಜಮಾಲ್ ಅದ್ಭುತ ಪ್ರತಿಭೆಯುಳ್ಳ ಬಾಲಕನಾಗಿದ್ದು, ಕ್ರಿಕೆಟ್ ಕುರಿತು ಅತೀವ ಆಸಕ್ತಿ ಹೊಂದಿರುವ ಈತ, ಶಾಲಾ ತಂಡವನ್ನು ಈಗಾಗಲೇ ಪ್ರತಿನಿಧಿಸುತ್ತಿದ್ದಾನೆ. ಈತನ ತಂದೆಯೂ ಕ್ರಿಕೆಟ್ ಆಟಗಾರರಾಗಿದ್ದು, ಮಗನಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಬಾಲಕನ ಪ್ರತಿಭೆಯನ್ನು ಗುರುತಿಸಿರುವ ಕ್ರಿಕೆಟ್ ಕೋಚ್ ಉತ್ತಮ್ ಭಟ್ಟಾಚಾರ್ಯ, ಪ್ರತಿನಿತ್ಯವೂ ಬಾಲಕನಿಗೆ ತರಬೇತಿ ನೀಡುತ್ತಿದ್ದಾರೆ. ಮುಂದೊಂದು ದಿನ ಶಯಾನ್ ಜಮಾಲ್, ದೇಶದ ಪರವಾಗಿ ಕ್ರಿಕೆಟ್ ಆಡುವ ವಿಶ್ವಾಸ ಹೊಂದಿರುವ ಅವರು, ಈ ನಿಟ್ಟಿನಲ್ಲಿ ಆತನಿಗೆ ಈಗಿನಿಂದಲೇ ತರಬೇತಿ ನೀಡುತ್ತಿರುವುದಾಗಿ ಹೇಳಿದ್ದಾರೆ.