ವಾಟ್ಸಪ್ ನಲ್ಲಿ ಫೋಟೋ ವೈರಲ್ಲಾದ ಕಾರಣ 22 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬರೇಲಿಯ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಗೆ ಆಕೆಯ ಆಪ್ತ ಸ್ನೇಹಿತನೇ ಮೋಸ ಮಾಡಿದ್ದು, ಇದರಿಂದ ಮನನೊಂದ ಹುಡುಗಿ ನೇಣಿಗೆ ಶರಣಾಗಿದ್ದಾಳೆ.
ವಾಸ್ತವವಾಗಿ ಆರೋಪಿ ಹಾಗೂ ಯುವತಿಯ ಮನೆಯವರು ಆಪ್ತರಾಗಿದ್ದರು. ಆಗಾಗ ಮನೆಗೆ ಬಂದು ಹೋಗಿ ಮಾಡ್ತಿದ್ದರು. ಮದುವೆ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಹುಡುಗಿಯನ್ನು ಆರೋಪಿ ಜೊತೆ ಮನೆಗೆ ಕಳುಹಿಸಿದ್ದರಂತ ಮನೆಯವರು.
ಯುವತಿ ತಂದೆ ಹೇಳುವಂತೆ, ದಾರಿ ಮಧ್ಯೆ ನಶೆಯ ಮಾತ್ರೆ ನೀಡಿ ಯುವಕ, ಯುವತಿಯ ಪ್ರಜ್ಞೆ ತಪ್ಪಿಸಿದ್ದಾನೆ. ಆಮೇಲೆ ತನ್ನ ಕಾರ್ಯ ಮುಗಿಸಿದ್ದಾನೆ. ನಂತ್ರ ಹುಡುಗಿಗೆ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ. ಆತನ ಶರತ್ತನ್ನು ಹುಡುಗಿ ಒಪ್ಪದ ಕಾರಣ ಫೋಟೋವನ್ನು ವಾಟ್ಸಪ್ ನಲ್ಲಿ ಕಳುಹಿಸಿದ್ದಾನೆ. ಈ ಫೋಟೋವನ್ನು ಗ್ರಾಮದ ಇತರ ಹುಡುಗರೂ ನೋಡಿದ್ದಾರೆ. ಇದರಿಂದ ಮನನೊಂದು ಹುಡುಗಿ ಈ ರೀತಿ ಮಾಡಿಕೊಂಡಿದ್ದಾಳೆ.