ಮನೆಯಲ್ಲಿದ್ದ ಫ್ರಿಜ್ ನ ಕಂಪ್ರೆಸರ್ ಸ್ಪೋಟಗೊಂಡ ವೇಳೆ ಅದರಿಂದ ವಿಷಕಾರಿ ಅನಿಲ ಸೋರಿಕೆಯಾದ ಕಾರಣ ಪತಿ, ಪತ್ನಿ ಹಾಗೂ ಪುಟ್ಟ ಮಗುವೊಂದು ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
40 ವರ್ಷದ ಅನಿಲ್ ರಾಜ್, ಅವರ ಪತ್ನಿ 30 ವರ್ಷದ ಅರುಣ ಹಾಗೂ 4 ವರ್ಷದ ಪುತ್ರಿ ಅಲಿಷಾ ಮೃತಪಟ್ಟವರಾಗಿದ್ದು, ಹಾಲು ಹಾಕುವವನು ಬೆಳಿಗ್ಗೆ ಬಂದು ನೋಡಿದ ವೇಳೆ ದುರಂತ ಬೆಳಕಿಗೆ ಬಂದಿದೆ.
ದಂಪತಿಗಳಿಬ್ಬರೂ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕುಟುಂಬ ಸದಸ್ಯರೆಲ್ಲಾ ರಾತ್ರಿ ನಿದ್ದೆಯಲ್ಲಿದ್ದ ವೇಳೆ ಕಂಪ್ರೆಸರ್ ಸ್ಫೋಟಗೊಂಡಿರಬಹುದೆಂದು ಹೇಳಲಾಗಿದೆ. ಈ ವೇಳೆ ಸೋರಿಕೆಯಾದ ವಿಷಾನಿಲ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ.