ಮುಂಬೈ: ಪಠ್ಯದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೋ, ಬೇಡವೋ ಎಂಬ ಚರ್ಚೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಒಂದು ವರ್ಗ ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕು ಎಂದು ಹೇಳಿದರೆ, ಮತ್ತೊಂದು ವರ್ಗ ಲೈಂಗಿಕ ಶಿಕ್ಷಣ ಬೇಕಿಲ್ಲ ಎಂದು ಹೇಳುತ್ತದೆ.
ಇದೀಗ ನಟಿಮಣಿಯೊಬ್ಬರು, ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೆಂದು ಹೇಳಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಊರ್ವಶಿ ರೌಟೇಲಾ ಅವರು, ಮಕ್ಕಳಿಗೆ ಲೈಂಗಿಕ ಶಿಕ್ಷಣ ಹೇಳಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2012ರ ಮಿಸ್ ಯೂನಿವರ್ಸ್ ಆಗಿರುವ ನಟಿ ಊರ್ವಶಿ ರೌಟೇಲಾ, ಮುಂಬೈನಲ್ಲಿ ನಡೆದ ‘ಸೆಕ್ಸ್ ಚಾಟ್ ವಿತ್ ಪಪ್ಪು ಅಂಡ್ ಪಾಪ’ ಎಂಬ ಅಂತರ್ಜಾಲ ಅವತರಣಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಊರ್ವಶಿ ರೌಟೇಲಾ, ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕಿದೆ. ನಾನು ನಟಿಯಾಗಿ ಸಾಮಾಜಿಕ ಜವಾಬ್ದಾರಿ ಹೊಂದಿದ್ದೇನೆ. ಲೈಂಗಿಕ ಶಿಕ್ಷಣದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದ್ದಾರೆ.