ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ದಬಾಂಗ್ ಹುಡುಗ ಸಲ್ಮಾನ್ ಖಾನ್ ಒಂದಾಗಿ ಎಷ್ಟೋ ದಿನಗಳಾಯ್ತು. ಇಬ್ಬರು ಮತ್ತೆ ಕುಚುಕು ಗೆಳೆಯರಾಗಿದ್ದಾರೆ. ಆಗಾಗ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸ್ನೇಹ ಗಟ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.
ಇತ್ತೀಚೆಗೆ ಮುಂಬೈನ ರಸ್ತೆಯಲ್ಲಿ ಸೈಕಲ್ ಓಡಿಸಿ ಇಬ್ಬರು ಸುದ್ದಿಯಾಗಿದ್ದರು. ಈಗ ಮತ್ತೆ ಸಲ್ಮಾನ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ಶಾರುಕ್. ‘ಸುಲ್ತಾನ್’ ಚಿತ್ರವನ್ನು ಈವರೆಗೂ ನೋಡಿಲ್ಲ ಎಂದಿರುವ ಶಾರುಕ್, ಆದರೆ ಅದರಲ್ಲಿ ಬರುವ ಒಂದು ಸೀನ್ ಬಗ್ಗೆ ಹೇಳಿದ್ದಾರೆ.
ಸಿನಿಮಾದಲ್ಲಿ ‘ಸುಲ್ತಾನ್’ ಸಲ್ಮಾನ್ ಖಾನ್ ತಾನು ಶಾರುಕ್ ಅಭಿಮಾನಿ ಎನ್ನುತ್ತಾರೆ. ಈ ಬಗ್ಗೆ ಮಾತನಾಡಿದ ಶಾರುಕ್, ‘ಸುಲ್ತಾನ್’ ನನ್ನು ಭೇಟಿ ಮಾಡಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಸೈಕಲ್ ಓಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾರುಕ್, ಸಲ್ಮಾನ್ ಜೊತೆ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ರಾತ್ರಿ ಅವರ ಮನೆಗೆ ಹೋದ್ರೆ ಬೆಳಗಾಗುವವರೆಗೂ ಮಾತನಾಡ್ತೇವೆ ಎಂದಿದ್ದಾರೆ.