ಬೆಂಗಳೂರು: ವರದಕ್ಷಿಣೆ, ನಪುಂಸಕತೆ, ವ್ಯಭಿಚಾರವನ್ನು ಆಧಾರವಾಗಿಟ್ಟುಕೊಂಡು ವಿವಾಹ ವಿಚ್ಛೇದನ ಹೆಚ್ಚುತ್ತಿದೆ. ಈ ಪ್ರಕರಣದಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲ. ಕರ್ನಾಟಕ ರಾಜ್ಯ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಒಂದು, ಎರಡು ಹಾಗೂ ಮೂರನೇ ಸ್ಥಾನ ಕೇರಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ಸಿಕ್ಕಿದೆ.
2014 ರಲ್ಲಿ 16,690 ದಂಪತಿಗಳು ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರಂತೆ. ಇದರಲ್ಲಿ ಹಲವಾರು ಸಂಬಂಧಗಳು ಮದುವೆಯಾದ ಕೆಲವೇ ವರ್ಷಗಳಲ್ಲೇ ಮುರಿದುಬಿದ್ದಿದೆ.
ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣದ ಪರಿಣಾಮ, ಕೌಟುಂಬಿಕ ಕೋರ್ಟ್ ನ್ಯಾಯಾಧೀಶರು ಒಂದು ಪ್ರಕರಣಕ್ಕೆ ಕೇವಲ 6 ನಿಮಿಷ ಮೀಸಲಿರಿಸುತ್ತಾರಂತೆ. ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿರುವ ದಂಪತಿಗಳನ್ನು ಒಂದಾಗಿಸಲು ಸಂಧಾನ ಕೇಂದ್ರಗಳು ಪ್ರಯತ್ನ ಪಡುತ್ತಿವೆಯಾದರೂ ದಿನೇ ದಿನೇ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಲೇ ಇವೆ.