Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಒಂದೇ ಬಾರಿ ಈತನ 13 ಪತ್ನಿಯರು ಪ್ರೆಗ್ನೆಂಟ್..!

$
0
0
ಒಂದೇ ಬಾರಿ ಈತನ 13 ಪತ್ನಿಯರು ಪ್ರೆಗ್ನೆಂಟ್..!

ವಿಶ್ವದಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸುದ್ದಿ ಕೇಳುವಾಗ, ಓದುವಾಗ ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹಾಗೆ ಆಶ್ಚರ್ಯ, ಆಘಾತ ಹುಟ್ಟಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ.

ಈ ಫೋಟೋದಲ್ಲಿ ಕಾಣಿಸುವ ವ್ಯಕ್ತಿ ಬದುಕು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎರಡು ಜಡೆ ಒಟ್ಟಿಗಿರಲ್ಲ ಎಂಬ ಮಾತಿದೆ. ಆದ್ರೆ ಈ ಮಾತನ್ನು ಈ ವ್ಯಕ್ತಿ ಸುಳ್ಳು ಮಾಡಿದ್ದಾನೆ. ಒಂದಲ್ಲ, ಎರಡಲ್ಲ ಬರೋಬ್ಬರಿ 13 ಮಹಿಳೆಯರ ಒಬ್ಬನೇ ಪತಿ ಈತ. ಇದಕ್ಕಿಂತ ಹೆಚ್ಚು ಆಶ್ಚರ್ಯ ಹುಟ್ಟಿಸುವ ವಿಷಯವೆಂದ್ರೆ, ಈತನ 13 ಪತ್ನಿಯರೂ ಈಗ ಗರ್ಭ ಧರಿಸಿದ್ದಾರೆ. ಹೌದು, ಈ ಮಹಿಳೆಯರ ಹೊಟ್ಟೆಯಲ್ಲಿರುವ ಶಿಶುವಿನ ತಂದೆ ಈತನೊಬ್ಬನೆ.

ಈತ ಹಾಗೂ ಈತನ ಗರ್ಭಿಣಿ ಪತ್ನಿಯರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 13 ಪತ್ನಿಯರು ಗರ್ಭ ಧರಿಸಲು ಕಾರಣವಾದ ಈತ ವಿಶ್ವ ದಾಖಲೆ ಮಾಡಿದ್ದಾನೆ. ನೈಜೀರಿಯಾದ ಈ ವ್ಯಕ್ತಿ 13 ಪತ್ನಿಯರ ಜೊತೆ ವಾಸವಾಗಿದ್ದಾನೆ. ಎಲ್ಲ ಪತ್ನಿಯರೂ ಸಂತೋಷವಾಗಿದ್ದಾರಂತೆ. ಗೆಳತಿಯರ ಹಾಗೆ ಖುಷಿ ಖುಷಿಯಿಂದಿದ್ದಾರಂತೆ. ಒಬ್ಬರಿಗೊಬ್ಬರು ನೆರವಾಗ್ತಾರಂತೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>