ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆಲ್ಲ ಇಂಟರ್ನೆಟ್ ಬಳಸುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಡೇಟಾ ಪ್ಯಾಕ್ ಗಳ ದರ ದುಬಾರಿಯಾಗಿರುವುದರ ಜೊತೆಗೆ ಡೇಟಾ ಪ್ಯಾಕ್ ಬಳಕೆಯ ಅವಧಿಯೂ ಸೀಮಿತ ಅವಧಿಯದ್ದಾಗಿರುತ್ತದೆ. ಇದಕ್ಕೆ ಅಂತ್ಯ ಹಾಡಲು ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮುಂದಾಗಿದೆ.
ಡೇಟಾ ಬಳಕೆಗೆ ಇದುವರೆಗೂ ಗರಿಷ್ಟ 90 ದಿನಗಳ ಅವಧಿ ಇದ್ದು, ಇದನ್ನು ಒಂದು ವರ್ಷಕ್ಕೆ ವಿಸ್ತರಿಸಲು ಟ್ರಾಯ್ ನಿರ್ಧರಿಸಿದೆ. ಆನೇಕ ಗ್ರಾಹಕರು ಡೇಟಾ ಪ್ಯಾಕ್ ಹಾಕಿಸಿಕೊಂಡ ವೇಳೆ ನಿಗದಿತ ಅವಧಿಯಲ್ಲಿ ಅದನ್ನು ಬಳಸಲು ಸಾಧ್ಯವಾಗದಿದ್ದರೆ ಅದು ವ್ಯರ್ಥವಾಗುತ್ತಿತ್ತು.
ಇದೀಗ ಈ ಅವಧಿಯನ್ನು ಗರಿಷ್ಟ 1 ವರ್ಷಗಳವರೆಗೆ ವಿಸ್ತರಿಸಲು ತೀರ್ಮಾನಿಸಿರುವುದರಿಂದ ಬಳಕೆದಾರರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ಈ ಕುರಿತು ಪ್ರಾಧಿಕಾರಕ್ಕೆ ಮನವಿ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜುಲೈ 26 ರೊಳಗೆ ಬಳಕೆದಾರರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದಾಗಿದೆ. ಬಳಿಕ ನೂತನ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ.