ತನ್ನ ಪ್ರೇಯಸಿ ರೀವಾ ಸ್ಟೀನ್ ಕ್ಯಾಂಪ್ ಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪ್ಯಾರಾಲಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಗೆ ದಕ್ಷಿಣ ಅಫ್ರಿಕಾದ ಪ್ರಿಟೋರಿಯಾ ನ್ಯಾಯಾಲಯ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಈ ಕುರಿತು ತೀರ್ಪು ಇಂದು ಹೊರ ಬಿದ್ದಿದ್ದು, 2013 ರಲ್ಲಿ ವ್ಯಾಲೆಂಟಿನ್ ಡೇ ದಿನದಂದೇ ತನ್ನ ಐಷಾರಾಮಿ ಮನೆಯಲ್ಲಿ ಆರು ಬಾರಿ ಬಂಗಾರ ಪದಕ ವಿಜೇತರಾಗಿದ್ದ ಆಸ್ಕರ್ ಪಿಸ್ಟೋರಿಯಸ್ ಪ್ರೇಯಸಿ ರೀವಾ ಸ್ಟೀನ್ ಕ್ಯಾಂಪ್ ಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.
ಪಿಸ್ಟೋರಿಯಸ್ ಮಾಡಿದ್ದ ಕ್ರೂರ ಕೃತ್ಯಕ್ಕೆ ಕಡಿಮೆಯೆಂದರೂ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ತಕ್ಷಣವೇ ಅವರನ್ನು ವಶಕ್ಕೆ ಪಡೆದ ಪೊಲೀಸರು ಜೈಲಿಗೆ ಕರೆದುಕೊಂಡು ಹೋದರು.