ಗಂಗಾ ನೈರ್ಮಲ್ಯ ಅಭಿಯಾನದ ನಂತ್ರ ಮೋದಿ ಸರ್ಕಾರ ಹಸುಗಳ ರಕ್ಷಣೆಗೆ ಒತ್ತು ಕೊಡ್ತಾ ಇದೆ. ಸ್ಥಳೀಯ ತಳಿಯ ಹಸುಗಳಿಗೆ ಹೆಚ್ಚಿನ ಪ್ರಚಾರ ಹಾಗೂ ಕಸಾಯಿ ಖಾನೆಗಳಿಗೆ ಹಸುಗಳ ರವಾನೆಯನ್ನು ತಪ್ಪಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.
ಸರ್ಕಾರದ ಪ್ರತಿ ಯೋಜನೆಯನ್ನು ಪ್ರತಿ ವ್ಯಕ್ತಿಗೆ ತಲುಪಿಸುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಮಾಡಲಾಗಿದೆಯೋ ಅದೇ ರೀತಿಯಲ್ಲಿ ಹಸುಗಳಿಗೂ ಯೋಜನೆ ಜಾರಿಗೆ ಬರಲಿದೆ. ಪ್ರತಿಯೊಂದು ದೇಸಿ ಹಸುವಿನ ರೆಕಾರ್ಡ್ ಸಿದ್ಧವಾಗಲಿದೆ. ಆಧಾರ್ ಕಾರ್ಡ್ ನಂತೆ ದೇಸಿ ಹಸುಗಳ ಕೊರಳಿಗೆ ಒಂದು ಟ್ಯಾಗ್ ಬೀಳಲಿದೆ.
ಆಧಾರ್ ಕಾರ್ಡ್ ನಂತೆ ದೇಶದ ಪ್ರತಿಯೊಂದು ದೇಸಿ ಹಸುವಿಗೆ ಒಂದು ನಂಬರ್ ನೀಡಲಾಗುವುದು. ಹಸುವಿನ ತಳಿ ಸೇರಿದಂತೆ ಪ್ರತಿಯೊಂದು ಮಾಹಿತಿ ಈ ಟ್ಯಾಗ್ ನಲ್ಲಿರಲಿದೆ. ರಾಜ್ಯ ಸರ್ಕಾರದ ನೆರವಿನಿಂದ ದೇಶದ ಸುಮಾರು 8.5 ಕೋಟಿ ಹಸುಗಳಿಗೆ ಈ ಟ್ಯಾಗ್ ಸಿಗಲಿದೆ. ಸ್ವದೇಶಿ ತಳಿಗಳ ರಕ್ಷಣೆ ಹಾಗೂ ಹೆಚ್ಚಿನ ಹಾಲು ಉತ್ಪಾದನೆಗಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರ್ತಾ ಇದೆ. ಟ್ಯಾಗ್ ಜೊತೆಗೆ ಹೆಲ್ತ್ ಕಾರ್ಡ್ ಕೂಡ ಹಸುಗಳಿಗೆ ಸಿಗಲಿದೆ. ಅದ್ರಲ್ಲಿ ಹಸು ಹಾಗೂ ಹಾಲಿನ ಆರೋಗ್ಯ, ಹಾಲಿನ ಪ್ರಮಾಣದ ವಿವರವಿರಲಿದೆ.