ವಿಶ್ವವಿಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಪುರಿ ಜಗನ್ನಾಥ ಯಾತ್ರೆಯ ಸಂದರ್ಭದಲ್ಲಿ ಮರಳಿನ 100 ರಥಗಳನ್ನು ಮಾಡಿದ್ದಾರೆ.
ಜುಲೈ 6 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿರುವ 9 ದಿನಗಳ ಅದ್ದೂರಿ ರಥ ಯಾತ್ರೆಯಲ್ಲಿ ಜನರು ಬಲಭದ್ರ, ಜಗನ್ನಾಥ, ದೇವಿ ಸುಭದ್ರಾಳ ದರ್ಶನದ ಜೊತೆಗೆ ಸುದರ್ಶನ್ ಅವರ ಕಲಾಕೃತಿಯನ್ನು ಕೂಡ ಕಣ್ತುಂಬಿಕೊಳ್ಳಬಹುದು.
ಸುದರ್ಶನ್ ಮತ್ತವರ ಟೀಮ್ ಶುಕ್ರವಾರದಿಂದಲೇ ರಥಗಳ ನಿರ್ಮಾಣದಲ್ಲಿ ತೊಡಗಿತ್ತು. ಎಲ್ಲ 100 ರಥಗಳನ್ನು ಇವರು 3 ದಿನ 20 ಗಂಟೆಯಲ್ಲಿ ಮುಗಿಸಿದ್ದಾರೆ. ಸುದರ್ಶನ್ ಪಟ್ನಾಯಕ್ ಈ ಕಲಾಕೃತಿಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಸಬೇಕೆಂಬ ಆಸೆ ಹೊಂದಿದ್ದಾರೆ.
ಸುದರ್ಶನ್ ಅವರ ಈ ಮರಳು ರಥವನ್ನು ಓಡಿಸ್ಸಾದ ಪ್ರವಾಸ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಅಶೋಕ ಚಂದ್ರ ಪಾಂಡೆ ಉದ್ಘಾಟನೆ ನೆರವೇರಿಸಿದ್ದಾರೆ.