ಬೆಂಗಳೂರು: ಹೊಸದಾಗಿ ಮದುವೆಯಾದ ದಂಪತಿ ತಮ್ಮ ನಡುವೆ, ವಿಚಾರ ವಿನಿಮಯ ಮಾಡಿಕೊಳ್ಳುವುದು ಮಾಮೂಲಿ. ಹೀಗೆ ಮದುವೆಯಾದ 8 ನೇ ದಿನ ಪತ್ನಿ ಹೇಳಿದ ಸತ್ಯವೊಂದು ಆಕೆಯ ಸಾವಿಗೇ ಕಾರಣವಾದ ಘಟನೆ ನಡೆದಿದೆ.
ಬೆಂಗಳೂರಿನ ಮಹಾದೇವಪುರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಕೃಷ್ಣ ಎಂಬಾತ ಯಶೋಧಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಗೆಳೆಯರು, ಆಪ್ತರ ಸಮ್ಮುಖದಲ್ಲಿ ಮದುವೆಯಾದ ಕೃಷ್ಣ, 8 ದಿನಕ್ಕೇ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ರಾಮಪುರ ಠಾಣೆ ಪೊಲೀಸರಿಗೆ ದೂರು ನೀಡಲು ಹೋಗಿದ್ದಾನೆ. ಈತನ ನಡೆಯಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೇ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ತಾನು ಹಿಂದೆಯೇ ಮದುವೆಯಾಗಿದ್ದು, ಇದು ನನಗೆ ಎರಡನೇ ಮದುವೆ ಎಂದು ಯಶೋಧಾ ಹೇಳಿದ್ದೇ ಆತ ಕೊಲೆ ಮಾಡಲು ಕಾರಣ. ಪತ್ನಿಯನ್ನು ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಂಗಡಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ವಿಚಾರಣೆಯಲ್ಲಿ ಕೃಷ್ಣ ತಿಳಿಸಿದ್ದಾನೆ ಎನ್ನಲಾಗಿದೆ.