ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ನಾಗ್ಪುರ ವಿಮಾನ ನಿಲ್ದಾಣದ ಬಳಿ ತಮ್ಮ ಕಾರನ್ನು ತಾವೇ ತಳ್ಳಿದ್ದಾರೆ. ಬುಲೆಟ್ ಪ್ರೂಫ್ ಕಾರ್ ನಲ್ಲಿ ದೇವೇಂದ್ರ ಫಡ್ನವೀಸ್ ಮನೆಯಿಂದ ನಾಗ್ಪುರ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದ ಬಳಿ ಕಾರು ಹಾಳಾಗಿದೆ.
ಕೆಲ ಸಮಯ ಕಾರ್ ಬಿಡಲು ಚಾಲಕ ಪ್ರಯತ್ನ ಮಾಡಿದ್ದಾನೆ. ಏನೇ ಪ್ರಯಾಸ ಮಾಡಿದ್ರೂ ಕಾರ್ ಸ್ಟಾರ್ಟ್ ಆಗಲಿಲ್ಲ. ಆಗ ಕಾರನ್ನು ತಳ್ಳುವಂತೆ ಚಾಲಕ ಹೇಳಿದ್ದಾನೆ. ರಕ್ಷಣಾ ಸಿಬ್ಬಂದಿ ಕಾರ್ ತಳ್ಳುವ ಕಾರ್ಯಕ್ಕಿಳಿದಿದ್ದಾರೆ. ಇದನ್ನು ನೋಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಾರಿನಿಂದ ಇಳಿದು, ತಾವೂ ಕಾರು ತಳ್ಳುವ ಕಾರ್ಯ ಶುರುಮಾಡಿದ್ದಾರೆ.
ಮುಖ್ಯಮಂತ್ರಿಗಳು ಕಾರನ್ನು ತಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಎಂ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಕಾರ್ ತಳ್ಳಿ ತಳ್ಳಿ ಸುಸ್ತಾದ ಸಿಎಂ ನಂತ್ರ ಶಾಸಕರೊಬ್ಬರ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ರಂತೆ.