ಮಧ್ಯಪ್ರದೇಶದ ಅನುಪೂರ್ ಜಿಲ್ಲೆಯಲ್ಲಿ ದಂಗಾಗುವಂತಹ ಘಟನೆ ನಡೆದಿದೆ. ಮಹಿಳೆಯೊಬ್ಬಳು ಗೆಳೆಯನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಸಂಬಂಧ ಬೆಳೆಸಲಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.
ಅಜಯ್ ಹಲ್ಲೆಗೊಳಗಾದ ವ್ಯಕ್ತಿ. ಸುಮಾರು 12-15 ವರ್ಷಗಳಿಂದ ಇಬ್ಬರು ಹತ್ತಿರವಾಗಿದ್ದರು. ಮದುವೆಯಾಗಿದ್ದರೂ 10 ವರ್ಷಗಳಿಂದ ಸಂಬಂಧ ಬೆಳೆಸಿದ್ದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಗೆಳೆಯನ ಮನೆಗೆ ಬಂದು ಆತನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾಳೆ ಮಹಿಳೆ.
ಕಾಡಿನ ಮಧ್ಯೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡಿದ್ದಾಳೆ. ಗೆಳೆಯ ಇದಕ್ಕೊಪ್ಪದಿದ್ದಾಗ ತನ್ನ ಬ್ಯಾಗ್ ನಲ್ಲಿದ್ದ ಚಾಕುವಿನಿಂದ ಖಾಸಗಿ ಅಂಗ ಹಾಗೂ ಕುತ್ತಿಗೆ ಮೇಲೆ ಹಲ್ಲೆ ನಡೆಸಿದ್ದಾಳೆ. ಸದ್ಯ ಅಜಯ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.