ಗಂಗಾ ನದಿಯ ದಡದಲ್ಲಿ ಪಿಕ್ನಿಕ್ ಮಾಡುವವರಿಗೆ ಒಂದು ಕಹಿ ಸುದ್ದಿ. ಇನ್ನು ಗಂಗಾ ನದಿಯ ದಡದಲ್ಲಿ ಫೋಟೊ ತೆಗೆಯುವುದಾಗಲೀ ಅಥವಾ ಇನ್ಯಾವುದೋ ಕುಚೇಷ್ಟೆಯಾಗಲೀ ಮಾಡುವ ಹಾಗಿಲ್ಲ.
ಈಗಾಗಲೇ ಇಲ್ಲಿ 24 ಜನ ಪ್ರಾಣ ತೆತ್ತಿದ್ದಾರೆ. ಇನ್ನು ಮುಂದೆ ಫೋಟೋ ತೆಗೆಯಲು ಹೋಗಿ ನದಿಗೆ ಬೀಳಬಾರದೆಂಬ ಕಾರಣಕ್ಕೆ ಎಂಟರಿಂದ ಹತ್ತು ಫೂಟ್ ನ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗುತ್ತಿದೆ. ಈ ಬ್ಯಾರಿಕೇಡ್ ಗಳನ್ನು ಜಿಲ್ಲಾ ಸಮಿತಿ ನೀರಾವರಿ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲಿದೆ.
ಗಂಗಾನದಿಯ ಬಳಿ ಪೊಲೀಸರನ್ನು ಕಾವಲಿಗಾಗಿ ನೇಮಿಸಲಾಗಿದೆ. ಯಾರಾದರೂ ಗಂಗಾ ನದಿಯ ದಡದಲ್ಲಿ ಫೋಟೋ ತೆಗೆಯುವುದಾಗಲೀ ಅಥವಾ ಅನುಚಿತ ನಡವಳಿಕೆ ಮಾಡಿದರೆ ಅಂತವರನ್ನು ಬಂಧಿಸಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ಶಲಭ್ ಮಾಥುರ್ ಹೇಳಿದ್ದಾರೆ.