ಅಲಹಾಬಾದ್: ಅಪ್ರಾಪ್ತ ವಯಸ್ಸಿನವರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಹೊಸದೇನಲ್ಲ. ಅಪ್ರಾಪ್ತ ಬಾಲಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಅಲಹಾಬಾದ್ ನಡೆದಿದ್ದು, ಬಾಲಕನ ತಂದೆ ಸಂತ್ರಸ್ಥೆಯನ್ನು ಹತ್ಯೆ ಮಾಡಿದ್ದಾನೆ.
7 ವರ್ಷದ ಬಾಲಕಿ ಮೇಲೆ ಮನೆಯ ಸಮೀಪದಲ್ಲೇ ವಾಸವಾಗಿದ್ದ 15 ವರ್ಷದ ಬಾಲಕ ಜೂನ್ 5 ರಂದು ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥ ಬಾಲಕಿ ಅತ್ಯಾಚಾರದ ಬಗ್ಗೆ ಬೇರೆಯವರಿಗೆ ಮಾಹಿತಿ ನೀಡಿದರೆ ಮರ್ಯಾದೆ ಹೋಗುತ್ತದೆ ಎಂದು ಅಂಜಿದ ಬಾಲಕನ ತಂದೆ ಆಕೆಯನ್ನು ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ, ಆಕೆಯ ಮನೆಯವರಿಗೂ ತಿಳಿಸದೇ, ಮೃತದೇಹದ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಬಾಲಕಿಯ ಪೋಷಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬಾಲಕಿಯ ಪೋಷಕರು ಶವ ಹೊರತೆಗೆದು ಪ್ರತಿಭಟನೆ ಮಾಡಲು ಮುಂದಾಗಿದ್ದು, ಇದಕ್ಕೆ ಅವಕಾಶ ನೀಡದೇ ಪೊಲೀಸರು ಆರೋಪಿಗೆ ಸಾಥ್ ನೀಡಿದ್ದಾರೆ. ಇದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಬಾಲಾಪರಾಧಿಯನ್ನು ಬಂಧಿಸಲಾಗಿದೆ.