ಕೇರಳದ ಪುತುಪ್ಪನಮ್ ಹಳ್ಳಿಯ 73 ವರ್ಷದ ಮೀನಾಕ್ಷಿಯಮ್ಮ ಕಲರಿಪಯಟ್ಟುವಿನ ಕಲಾವಿದೆ. ಇವರು ತಮ್ಮದೇ ಆದ ಮೀನಾಕ್ಷಿ ಗುರುಕುಲದಲ್ಲಿ ಮಕ್ಕಳಿಗೆ ಕಲರಿಪಯಟ್ಟು ತರಬೇತಿ ನೀಡುತ್ತಾರೆ.
ಮುಂಜಾನೆ 5 ಗಂಟೆಯಿಂದ ಇವರ ಶಾಲೆ ಆರಂಭವಾಗುತ್ತದೆ. “ಮಕ್ಕಳೊಂದಿಗೆ ನಾನೂ ಕಲರಿಪಯಟ್ಟುವಿನ ಅಭ್ಯಾಸ ಮಾಡುತ್ತೇನೆ. ನನ್ನ ಅಪ್ಪನ ಪ್ರೋತ್ಸಾಹದಿಂದ ನಾನು 5ನೇ ವರ್ಷದಿಂದಲೇ ಈ ಆರ್ಟ್ ಅನ್ನು ಕಲಿಯುತ್ತಿದ್ದೇನೆ” ಎನ್ನುತ್ತಾರೆ ಮೀನಾಕ್ಷಿಯಮ್ಮ.
“ಈ ವಯಸ್ಸಿನಲ್ಲೂ ನಾನು ನನಗೆ ಇಷ್ಟವಾದ ಆಹಾರವನ್ನು ಸೇವಿಸುತ್ತೇನೆ. ಯಾವುದೇ ಡಯಟ್ ಅನ್ನು ನಾನು ನಂಬುವುದಿಲ್ಲ. ನನ್ನ ವಿದ್ಯಾರ್ಥಿಗಳಿಗೂ ಇದನ್ನು ಹೇಳಿಲ್ಲ. ಕ್ಲಾಸ್ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಮೆಣಸಿನ ಕಾಳಿನ ಜ್ಯೂಸ್ ಅನ್ನು ಕೊಡುತ್ತೇವೆ. ಕಲರಿಪಯಟ್ಟೇ ನಮ್ಮ ಆರೋಗ್ಯ, ಮನಸ್ಸನ್ನು ಸುಸ್ಥಿತಿಯಲ್ಲಿಡುತ್ತದೆ” ಎನ್ನುತ್ತಾರೆ.
”ಉಳಿದ ಎಲ್ಲ ಕ್ರೀಡೆಗಳಂತೆ ಕಲರಿಪಯಟ್ಟುವಿನಲ್ಲಿ ರಿಟೈರ್ ಮೆಂಟ್ ಎಂಬುದಿಲ್ಲ. ನನ್ನ ಶರೀರದಲ್ಲಿ ಶಕ್ತಿ ಇರುವವರೆಗೂ ನಾನು ಕಲರಿಪಯಟ್ಟುವನ್ನು ಕಲಿಸುತ್ತೇನೆ, ಕಲಿಯುತ್ತಲೂ ಇರುತ್ತೇನೆ” ಎನ್ನುವ ಮೀನಾಕ್ಷಿಯಮ್ಮನ ಸಂಕಲ್ಪವನ್ನು ಮೆಚ್ಚಲೇ ಬೇಕು.