ಹಣ್ಣಿನ ಸಂಖ್ಯೆ ಕಡಿಮೆಯಾಗಿರೋದ್ರಿಂದ ದೇಶದಲ್ಲಿ ಕ್ರೈಂ ಜಾಸ್ತಿಯಾಗ್ತಿದೆ. ಆಶ್ಚರ್ಯವಾದ್ರೂ ಇದು ಸತ್ಯ. ನ್ಯೂಜಿಲ್ಯಾಂಡ್ ನಲ್ಲಿ ಅವಕಾಡೊ( ಬೆಣ್ಣೆ ಹಣ್ಣು) ಪ್ರಮಾಣ ಕಡಿಮೆಯಾಗಿದೆ. ಇದ್ರಿಂದಾಗಿ ದೇಶದಲ್ಲಿ ಕಳ್ಳತನ ಜಾಸ್ತಿಯಾಗ್ತಾ ಇದೆ.
ಅವಕಾಡೊ ಹಣ್ಣಿಗೆ ದೇಶ- ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಹಾಗೆ ಅವಕಾಡೊ ನ್ಯೂಜಿಲ್ಯಾಂಡ್ ನ ಪ್ರಸಿದ್ಧ ಹಣ್ಣುಗಳಲ್ಲಿ ಒಂದು. ಹಿಂದಿನ ಬಾರಿ ದೇಶದಲ್ಲಿ ಬೆಳೆ ಚೆನ್ನಾಗಿ ಬಂದಿರಲಿಲ್ಲ. ಹಾಗಾಗಿ ಈ ಬಾರಿ ಈಗಾಗಲೇ 40 ಕಳ್ಳತನದ ಕೇಸ್ ದಾಖಲಾಗಿದೆ. ಕಾಳ ಸಂತೆಯಲ್ಲಿಯೂ ಇದ್ರ ವ್ಯವಹಾರ ಜೋರಾಗಿದೆ. ಲಾಭದಾಸೆಗೆ ಜನರು ಅವಕಾಡೊ ಹಣ್ಣಿನ ಕಳ್ಳತನಕ್ಕಿಳಿದಿದ್ದಾರೆ.
ಬೆಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅವಕಾಡೊ ಬೆಲೆ ಗಗನಕ್ಕೇರಿದೆ. ನ್ಯೂಜಿಲ್ಯಾಂಡ್ ಮಾರುಕಟ್ಟೆಯಲ್ಲಿ ಒಂದು ಅವಕಾಡೊ ಹಣ್ಣಿನ ಬೆಲೆ 250-300 ರೂಪಾಯಿಗೆ ಮಾರಾಟವಾಗ್ತಾ ಇದೆ. ಕಳ್ಳರ ಕಾಟಕ್ಕೆ ಬೇಸತ್ತಿರುವ ಬೆಳೆಗಾರರಿಗೆ ಹಣ್ಣಿನ ರಕ್ಷಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.