ಬಹಳಷ್ಟು ಮಂದಿ ಬಿಸಿ ಬಿಸಿಯಾದ ಕಾಫಿ, ಟೀ ಕುಡಿಯಲು ಇಷ್ಟ ಪಡುತ್ತಾರೆ. ಅಂತವರಿಗೆ ಒಂದು ಶಾಕ್ ಕಾದಿದೆ. ಹೌದು, ನೀವು ಅತಿ ಬಿಸಿಯಾದ ಕಾಫಿ, ಟೀ ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಗೆ ತುತ್ತಾಗಬೇಕಾಗುತ್ತದೆ ಎಂದು ಸಂಯುಕ್ತ ರಾಷ್ಟೀಯ ಕ್ಯಾನ್ಸರ್ ಏಜೆನ್ಸಿ, ಸಂಶೋಧನೆ ನಡೆಸಿ ಮಾಹಿತಿ ಬಹಿರಂಗಪಡಿಸಿದೆ.
IARC (international Agency for research on cancer) ನಿರ್ದೇಶಕ ಕ್ರಿಸ್ಟೋಫರ್ ವೈಲ್ಡ್ ಈ ಮಾಹಿತಿ ನೀಡಿದ್ದು, ಕಾಫಿ, ಟೀ ಸೇರಿದಂತೆ ಬಿಸಿಯಾದ ಯಾವುದೇ ಪಾನೀಯಗಳನ್ನು ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಕೋಶಗಳು ಬೆಳೆಯಲು ಕಾರಣವಾಗುತ್ತದೆ ಎಂದಿದ್ದಾರೆ.
ಸುಮಾರು 1000 ಕ್ಯಾನ್ಸರ್ ತಜ್ಞರನ್ನು ಒಳಗೊಂಡ ತಂಡ ಈ ಕುರಿತು ಅಧ್ಯಯನ ನಡೆಸಿದ್ದು, 65 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಹೊಂದಿದ ಕಾಫಿ, ಟೀ ಕುಡಿಯುವುದರಿಂದ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಅಧಿಕ ಎಂದು ಹೇಳಿದ್ದಾರೆ. ಅಂದ ಹಾಗೇ ಈ ಸಂಶೋಧನೆ ನಡೆದಿರುವುದು ಭಾರತದಲ್ಲಲ್ಲ. ಬದಲಾಗಿ ಚೀನಾ, ಇರಾನ್, ಟರ್ಕಿ, ದಕ್ಷಿಣ ಅಮೆರಿಕಾದಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದೆ.