ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಿದ್ದ ಜೆಟ್ ಏರ್ವೇಸ್ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದ ಸ್ವಲ್ಪ ಹೊತ್ತಿನಲ್ಲೇ ವಾಪಾಸ್ ಮರಳಿದೆ. ವಿಮಾನದ ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣವೆನ್ನಲಾಗಿದೆ.
ಜೆಟ್ ಏರ್ವೇಸ್ ನ 9W 2839 ವಿಮಾನದಲ್ಲಿ 65 ಮಂದಿ ಪ್ರಯಾಣಿಕರು ಹಾಗೂ ನಾಲ್ಕು ಮಂದಿ ವಿಮಾನ ಸಿಬ್ಬಂದಿಯಿದ್ದು, ಹಾರಿದ ಕೆಲ ಸಮಯದಲ್ಲೇ ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡಿತ್ತೆನ್ನಲಾಗಿದೆ.
ಇದರಿಂದ ಆತಂಕಗೊಂಡ ಸಿಬ್ಬಂದಿ, ವಿಮಾನವನ್ನು ಮತ್ತೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದು, ಎಲ್ಲ 65 ಮಂದಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ.