ಬ್ರೆಜಿಲ್ ನ ಈ ಜೋಡಿ ಈಗ ಗಿನ್ನಿಸ್ ಬುಕ್ ದಾಖಲೆಗೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ವಿಶ್ವದ ಅತಿ ಕುಳ್ಳನೆಯ ದಂಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರುಗಳು, ಈ ಕಾರಣಕ್ಕಾಗಿ ಗಿನ್ನಿಸ್ ದಾಖಲೆ ಪುಸ್ತಕ ಸೇರುವ ವಿಶ್ವಾಸ ಹೊಂದಿದ್ದಾರೆ.
ಕಾನೂನು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪೌಲೋ ಗೇಬ್ರಿಯಲ್ ಡಿಸಿಲ್ವಾ ಬಾರೊಸ್ ನ ಎತ್ತರ 34.8 ಇಂಚಿದ್ದರೆ ಸ್ವಂತದ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಕಟಿಸಿಯೋ ಹೋಶಿನೋ 35.2 ಇಂಚು ಎತ್ತರವಿದ್ದಾಳೆ. ಇವರಿಬ್ಬರೂ ವಿವಾಹಕ್ಕೂ ಮುನ್ನ ಒಬ್ಬರಿಗೊಬ್ಬರು ಅರಿತುಕೊಳ್ಳಲು ಡೇಟಿಂಗ್ ಕೂಡಾ ನಡೆಸಿದ್ದರಂತೆ.
ಈ ಜೋಡಿಯದು ಸುಖಿ ಸಂಸಾರ ಎನ್ನುವ ನೆರೆಹೊರೆಯವರು ಎಲ್ಲ ಕೆಲಸಗಳನ್ನು ಪರಸ್ಪರ ಹಂಚಿಕೊಂಡು ಮಾಡುತ್ತಾರೆ. ಈ ಜೋಡಿ ನಮ್ಮ ನಗರದ ಆಕರ್ಷಣೆ ಎನ್ನುತ್ತಾರೆ. ಈ ಜೋಡಿ ಹೊರಗೆ ಹೋದಾಗ ಇವರುಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಹಲವರು ಮುಗಿ ಬೀಳುತ್ತಾರೆ. ಇದ್ಯಾವುದಕ್ಕೂ ಬೇಸರ ಪಟ್ಟುಕೊಳ್ಳದೇ ಅವರ ಜೊತೆ ಫೋಸ್ ನೀಡುತ್ತಾರೆ.