ಚೀನಾ ಕಮ್ಯುನಿಸ್ಟ್ ಸರ್ಕಾರ 20-45 ವರ್ಷದ ಯುವಜನತೆಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಚೀನಾದ ಒಬ್ಬ ಯುವಕ ತನ್ನ ವೀರ್ಯವನ್ನು ದಾನ ಮಾಡಿದ್ರೆ ಅಲ್ಲಿನ ಸರ್ಕಾರ ರೋಸ್ ಗೋಲ್ಡ್ ಐಫೋನ್ ಉಡುಗೊರೆಯಾಗಿ ನೀಡಲಿದೆ. ದೇಶಕ್ಕಾಗಿ ದಯವಿಟ್ಟು ವೀರ್ಯವನ್ನು ದಾನ ಮಾಡಿ, ಉಚಿತವಾಗಿ ಐಫೋನ್ ಪಡೆಯಿರಿ ಎಂದು ಸರ್ಕಾರ ಕಟುವಾಗಿ ಮನವಿ ಮಾಡಿಕೊಂಡಿದೆ.
ರಾಜಕೀಯ ಹಾಗೂ ಸಾಂಸ್ಕೃತಿಕ ಕಾರಣದಿಂದಾಗಿ ಚೀನಾದ ವೀರ್ಯ ಸಂಗ್ರಹಣಾ ಬ್ಯಾಂಕ್ ನಲ್ಲಿ ವೀರ್ಯಾಣು ದಾನಿಗಳ ಸಂಖ್ಯೆ ಕಡಿಮೆಯಾಗಿದೆಯಂತೆ. ಚೀನಾ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಗೇಮ್ ಗಳನ್ನು ಕೂಡ ಅಪ್ ಲೋಡ್ ಮಾಡಿದೆ. ಗೇಮ್ ನಂತ್ರ ವೀರ್ಯ ದಾನಿಗಳಿಗೆ ಒಂದು ಸಾವಿರ ಅಮೆರಿಕಾ ಡಾಲರ್ ಅಥವಾ ಮೊಬೈಲ್ ಉಚಿತವಾಗಿ ನೀಡುವ ಆಫರ್ ಕೊಟ್ಟಿದೆ.
ವಾಸ್ತವವಾಗಿ ಪ್ರತಿ ವರ್ಷ ಚೀನಾದಲ್ಲಿ ಹಿರಿಯರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಕೆಲಸ ಮಾಡುವವರ ಸಂಖ್ಯೆ ಕ್ಷೀಣಿಸ್ತಾ ಇದೆ. ಈ ಸಮಸ್ಯೆ ಗಂಭೀರ ರೂಪ ಪಡೆಯುವುದರೊಳಗಾಗಿ ಸಮಸ್ಯೆಗೆ ಅಂತ್ಯ ಹಾಡಲು ಮುಂದಾಗಿದೆ ಚೀನಾ ಸರ್ಕಾರ. ಬೇರೆ ವ್ಯಕ್ತಿಗಳ ವೀರ್ಯದಿಂದ ಗರ್ಭ ಧರಿಸುವ ಹೆಣ್ಣು ಚೀನಾದ ತತ್ವಗಳಿಗೆ ಅವಹೇಳನ ಮಾಡಿದಂತೆ. ಹಾಗಾಗಿ ಅಲ್ಲಿನ ಜನರು ನಂಬಿರುವ ದೇವತೆ ಹಾಗೂ ತತ್ವಗಳಿಗೆ ಮಹತ್ವ ನೀಡಲು ಅಲ್ಲಿಯ ಯುವಕರ ವೀರ್ಯವೇ ಬೇಕೆಂಬುದು ಚೀನಾ ಸರ್ಕಾರದ ಉದ್ದೇಶವಾಗಿದೆ.