ಈ ಹಿಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದ ವೇಳೆ ಶಿಕ್ಷಕರು ಬೆಂಚ್ ಮೇಲೆ ನಿಲ್ಲುವ ಶಿಕ್ಷೆ ನೀಡುತ್ತಿದ್ದು, ಈಗ ಅದಕ್ಕೆ ಕಡಿವಾಣ ಬಿದ್ದಿದೆ. ಆದರೆ ಶಾಸಕರೊಬ್ಬರು ವಿಧಾನಸಭೆಯಲ್ಲಿ ಬೆಂಚ್ ಏರಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಬಿಜೆಪಿ ಶಾಸಕ ವಿಜೇಂದ್ರ ಗುಪ್ತಾ ಬೆಂಚ್ ಏರಿದವರಾಗಿದ್ದು, ವಿಧಾನಸಭೆಯಲ್ಲಿ ತಮಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡುತ್ತಿಲ್ಲವೆಂಬ ಕಾರಣಕ್ಕಾಗಿ ಇದರ ವಿರುದ್ದ ಪ್ರತಿಭಟಿಸಲು ವಿಜೇಂದ್ರ ಗುಪ್ತಾ ಈ ಮಾರ್ಗ ಆಯ್ದುಕೊಂಡಿದ್ದಾರೆ.
ಈ ಘಟನೆ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಶಾಕಿಂಗ್ ಎಂದಿದ್ದರೆ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್, ಇದೊಂದು ಅವಮಾನಕಾರಿ ಘಟನೆ. ಮುಂದೆಂದೂ ಇದು ಮರುಕಳಿಸುವುದನ್ನು ತಾವು ಬಯಸುವುದಿಲ್ಲವೆಂದಿದ್ದಾರೆ. ಅಲ್ಲದೇ ವಿಜೇಂದ್ರ ಗುಪ್ತಾರ ಈ ನಡವಳಿಕೆಯಿಂದ ಸದನದಲ್ಲಿ ವೃಥಾ ಕಾಲಹರಣವಾಯಿತೆಂದು ತಿಳಿಸಿದ್ದಾರೆ.