ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 4, ಬಿ.ಜೆ.ಪಿ. 2 ಹಾಗೂ ಜೆ.ಡಿ.ಎಸ್.ನ ಒಬ್ಬರು ಸದಸ್ಯರು ಜಯಗಳಿಸಿದ್ದಾರೆ.
7 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಿದ್ದ ಈ ಚುನಾವಣೆಯಲ್ಲಿ 8 ಮಂದಿ ಕಣದಲ್ಲಿದ್ದರು. ಕಣದಲ್ಲಿದ್ದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಡಾ, ವೆಂಕಟಾಪತಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ, ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಷದ್, ಬಿ.ಜೆ.ಪಿ.ಯ ವಿ.ಸೋಮಣ್ಣ, ಲೇಹರ್ ಸಿಂಗ್ ಹಾಗೂ ಜೆ.ಡಿ.ಎಸ್. ಪಕ್ಷದ ನಾರಾಯಣ ಸ್ವಾಮಿ ಜಯಗಳಿಸಿದ್ದಾರೆ. 225 ಮತಗಳು ಚಲಾವಣೆಯಾಗಿದ್ದವು.
ಚಲಾವಣೆಯಾದ 225 ಮತಗಳಲ್ಲಿ 223 ಮತಗಳು ಸಿಂಧುವಾಗಿದ್ದು, 2 ಮತಗಳು ಅಸಿಂಧುವಾಗಿವೆ. ಈ ಅಸಿಂಧು ಮತಗಳಲ್ಲಿ 1 ರಿಜ್ವಾನ್ ಅವರಿಗೆ, ಮತ್ತೊಂದು ಮತ ನಾರಾಯಣ ಸ್ವಾಮಿ ಅವರಿಗೆ ಬಿದ್ದಿದೆ. ಕಣದಲ್ಲಿದ್ದ ಜೆ.ಡಿ.ಎಸ್. ಅಭ್ಯರ್ಥಿ ವೆಂಕಟಾಪತಿ ಅವರು ಸೋತಿದ್ದಾರೆ.