ಲಖ್ನೋ: ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ರಾಮವೃಕ್ಷ ಯಾದವ್ ಮೃತಪಟ್ಟಿದ್ದಾನೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಘಟನೆಯಲ್ಲಿ ಎಸ್.ಪಿ. ಸೇರಿ 24 ಮಂದಿ ಸಾವು ಕಂಡಿದ್ದರು.
ಜೂನ್ 2ರಂದು ಹೈಕೋರ್ಟ್ ಆದೇಶದಂತೆ ಒತ್ತುವರಿದಾರರನ್ನು ತೆರವುಗೊಳಿಸಲು ಹೋಗಿದ್ದ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ದಾಳಿ ಮಾಡಿದ ಕಾರಣ, ಎಸ್.ಪಿ.ಮುಕುಲ್ ದ್ವಿವೇದಿ, ಠಾಣಾಧಿಕಾರಿ ಸಂತೋಷ್ ಸೇರಿದಂತೆ 24 ಮಂದಿ ಸಾವನ್ನಪ್ಪಿದ್ದರು. ಮಥುರಾ ಹೊತ್ತಿ ಉರಿಯುತ್ತಿದ್ದರೆ, ಈ ಕ್ಷೇತ್ರದ ಸಂಸದೆ ಹೇಮಾಮಾಲಿನಿ, ಟ್ವಿಟರ್ ನಲ್ಲಿ ಚಿತ್ರೀಕರಣದ ಫೋಟೋ ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುಪ್ತಚರ ಇಲಾಖೆಯ ಲೋಪವಾಗಿದೆ. ಪೊಲೀಸರು ಸಂಪೂರ್ಣ ಸಿದ್ಧರಾಗಿ ಹೋಗಬೇಕಿತ್ತು ಎಂದು ಹೇಳಿದ್ದರು. ಇದೀಗ ಬಂದಿರುವ ಮಾಹಿತಿಯಂತೆ ಪ್ರಕರಣದ ಪ್ರಮುಖ ಆರೋಪಿ ಮೃತಪಟ್ಟಿದ್ದಾನೆ. ಘಟನೆಗೆ ಕಾರಣನಾದ ರಾಮವೃಕ್ಷ ಯಾದವ್ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿ ಜಾವೀದ್ ಅಹಮದ್ ತಿಳಿಸಿದ್ದಾರೆ.