ವೇಶ್ಯಾವಾಟಿಕೆ ನಿಯಂತ್ರಣಕ್ಕೆ ಎಷ್ಟೆಲ್ಲಾ ಬಿಗಿ ಕ್ರಮಗಳನ್ನು ಕೈಗೊಂಡರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬೇರೆ, ಬೇರೆ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸರು ಹಲವು ಬಾರಿ ದಾಳಿ ಮಾಡಿದ್ದಾರೆ.
ಹೀಗೆ ಮಸಾಜ್ ಪಾರ್ಲರ್ ಬೋರ್ಡ್ ಹಾಕಿಕೊಂಡು, ಅಕ್ರಮ ದಂಧೆ ನಡೆಸುತ್ತಿದ್ದ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಣಸವಾಡಿ ವ್ಯಾಪ್ತಿಯ ನೆಹರು ರಸ್ತೆಯಲ್ಲಿನ ಮಸಾಜ್ ಪಾರ್ಲರ್ ನಲ್ಲಿ , ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್ ಮೊದಲಾದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು.
ಬ್ಯೂಟಿಷಿಯನ್ ಕೆಲಸ ಕೊಡಿಸುವುದಾಗಿ ಹೊರರಾಜ್ಯದ ಯುವತಿಯರನ್ನು ಕರೆದುಕೊಂಡು ಬಂದು ಇಲ್ಲಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ಈ ಕುರಿತು ಮಾಹಿತಿ ಕಲೆ ಹಾಕಿದ ಸಿ.ಸಿ.ಬಿ. ಪೊಲೀಸರು ಓರ್ವ ಪುರುಷ ಹಾಗೂ ಮಹಿಳೆಯನ್ನು ಬಂಧಿಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.