ನವದೆಹಲಿ: ‘ತುಂಗಾ ಪಾನ, ಗಂಗಾ ಸ್ನಾನ’ ಎಂಬ ಮಾತು ಪ್ರಚಲಿತದಲ್ಲಿದೆ. ಗಂಗಾ ಹಾಗೂ ತುಂಗಾ ನದಿಗಳು ಕಲುಷಿತಗೊಂಡಿದ್ದು, ಅವುಗಳನ್ನು ಶುದ್ಧೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಪವಿತ್ರ ಗಂಗಾಜಲದ ಬಗ್ಗೆ ಪೂಜ್ಯ ಭಾವನೆ ಇದೆ.
ಗಂಗಾಜಲ ಬೇಕೆಂದರೆ ಉತ್ತರ ಭಾರತಕ್ಕೆ ಹೋಗಬೇಕಿತ್ತು. ಇನ್ನುಮುಂದೆ ಆ ಚಿಂತೆ ನಿಮಗೆ ಬೇಡ. ನಿಮ್ಮ ಮನೆ ಬಾಗಿಲಿಗೇ ಗಂಗಾಜಲ ಪೂರೈಕೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಋಷಿಕೇಶ, ಹರಿದ್ವಾರದಿಂದ ಪವಿತ್ರ ಗಂಗಾಜಲ ಸಂಗ್ರಹಿಸಿ ಇ ಕಾಮರ್ಸ್ ವೇದಿಕೆ ಬಳಸಿಕೊಂಡು, ಅಂಚೆ ಇಲಾಖೆ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಕೇಂದ್ರ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಗಂಗಾಜಲವನ್ನು ಅಂಚೆಕಚೇರಿ ಮೂಲಕ ತಲುಪಿಸಬೇಕೆಂದು ಹಿಂದೆಯೇ ಕೆಲವರು ಮನವಿ ಮಾಡಿದ್ದು, ಅದನ್ನು ಪರಿಶೀಲಿಸಿದ ಬಳಿಕ, ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗಿದೆ. ಇನ್ನು ಮುಂದೆ ಮನೆಬಾಗಿಲಿಗೆ ಗಂಗಾಜಲ ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ.