ಜಗತ್ತಿನಲ್ಲಿ ಪ್ರತಿದಿನ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಬಿಹಾರದ ಪುರ್ನಿಯಾ ಜಿಲ್ಲೆಯ ಮೀರ್ಗಂಜ್ ನಲ್ಲಿ ನವೀನ್ ಗೂಗಿ ಎಂಬಾತನ ಪತ್ನಿ ಅದ್ಭುತ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಗು ಹುಟ್ಟಿದ ತಕ್ಷಣ ಕುಳಿತುಕೊಂಡಿದ್ದಾನೆ. ಕಪ್ಪೆಯಂತೆ ಕಾಣುವ ಈ ಬಾಲಕ ಖುರ್ಚಿ, ನೆಲ ಎಲ್ಲಿ ಬೇಕಾದ್ರೂ ಕುಳಿತುಕೊಳ್ಳುತ್ತಾನೆ.
ಗ್ರಾಮದ ಜನರು ದೇವರ ಸ್ವರೂಪವೆಂದು ಭಾವಿಸಿ ಪೂಜೆ ಮಾಡುತ್ತಿದ್ದಾರೆ. ಬೇರೆ ಬೇರೆ ಊರುಗಳಿಂದ ಜನರು ಈ ಬಾಲಕನನ್ನು ನೋಡಲು ಬರ್ತಿದ್ದಾರೆ. ಅನುವಂಶೀಯ ಅಸ್ವಸ್ಥತೆಯಿಂದ ಮಗು ಹೀಗೆ ಜನಿಸಿದೆ ಎಂದು ವೈದ್ಯರು ಹೇಳಿದ್ದಾರೆ. 10 ಸಾವಿರದಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆಯಂತೆ.
ಇಂತ ಮಕ್ಕಳ ಆಯಸ್ಸು ತುಂಬಾ ಕಡಿಮೆಯಿರುತ್ತದೆಯಂತೆ. ಇದನ್ನು ದೇವರೆಂದು ಪೂಜಿಸುವುದು ಮೂಢನಂಬಿಕೆ. ಇದರಲ್ಲಿ ಪವಾಡಗಳು ಯಾವುದೂ ಇಲ್ಲ ಎನ್ನುತ್ತಾರೆ ವೈದ್ಯರು. ಮಗು ಜನನಕ್ಕೂ ಮೊದಲೇ ಸೋನೊಗ್ರಾಫಿ ಮಾಡಿಸಿದ್ದರೆ ಸತ್ಯ ಗೊತ್ತಾಗುತ್ತಿತ್ತು ಎನ್ನುತ್ತಾರೆ ಅವರು.