ಪ್ರತಿ ತಿಂಗಳು ಋತುಚಕ್ರದ ಸಮಯ ಬಂತು ಅಂದ್ರೆ ಹುದಾಗೆ ದಿಗಿಲು, ಇದು ಕೇವಲ ಅನಾನುಕೂಲತೆ ಮತ್ತು ನೋವಲ್ಲ, ಸ್ಯಾನಿಟರಿ ಪ್ಯಾಡ್ ಗಳು, ಶುದ್ಧ ನೀರಿಲ್ಲದೆ ಸಿರಿಯಾದ ಡಮಾಸ್ಕಸ್ ನಲ್ಲಿ ಪ್ರತಿ ಮಹಿಳೆಯೂ ಅನುಭವಿಸುತ್ತಿರುವ ಯಮಯಾತನೆ.
2012 ರಿಂದ್ಲೂ ಸಿರಿಯಾದಲ್ಲಿ ಮಹಿಳೆಯರಿಗೆ ಬೇಕಾದ ಉತ್ಪನ್ನಗಳು ದೊರೆಯುತ್ತಿಲ್ಲ. ಪೂರ್ವ ಘೌತಾ ಪ್ರದೇಶವಂತೂ 3 ವರ್ಷಗಳಿಂದ ಬಂಡುಕೋರರ ವಶದಲ್ಲಿದೆ. ಮಹಿಳೆಯರಿಗೆ ಬೇಕಾದ ಕೆಲವೊಂದು ಹೈಜಿನಿಕ್ ಉತ್ಪನ್ನಗಳಿದ್ರೂ ತುಂಬಾನೇ ದುಬಾರಿ. ಇದ್ರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳ ಬದಲು ಹುದಾ ಬಟ್ಟೆಗಳನ್ನು ಬಳಸ್ತಿದ್ದಾರಂತೆ. ಪ್ಯಾಡ್ ಗಳ ಮರುಬಳಕೆಯಿಂದ ಇನ್ಫೆಕ್ಷನ್, ಕಿಡ್ನಿ ನೋವು, ಗುಪ್ತಾಂಗ ಮತ್ತು ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಯಾಗಿದೆ ಅಂತಾ ಅಳಲು ತೋಡಿಕೊಂಡಿದ್ದಾರೆ.
ಸಿರಿಯಾದಲ್ಲಿ ಸುಮಾರು 860,000 ಮಂದಿ ಬಂಡುಕೋರರ ಕಪಿಮುಷ್ಠಿಯಲ್ಲಿದ್ದಾರೆ. ಅವರಿಗೆ ಆಹಾರ, ನೀರು ಸೇರಿದಂತೆ ಅಗತ್ಯ ವಸ್ತುಗಳು ಸರಿಯಾಗಿ ದೊರೆಯುತ್ತಿಲ್ಲ. ಮಹಿಳೆಯರು ಗೋಳು ಹೇಳತೀರದು, ಸ್ವಚ್ಛತೆಯ ಕೊರತೆಯಿಂದಾಗಿ ಪ್ರತಿ ತಿಂಗಳು ಮುಟ್ಟಿನ ಅವಧಿಯಲ್ಲಿ ನರಕ ಯಾತನೆಪಡುತ್ತಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ 84,000 ಹೈಜಿನ್ ಪ್ಯಾಕ್ ಗಳನ್ನು ವಿತರಣೆ ಮಾಡಿದೆ, ಆದ್ರೆ ಎಲ್ಲರಿಗೂ ಅದು ಲಭ್ಯವಾಗಿಲ್ಲ. ಬಂಡುಕೋರರ ವಶದಲ್ಲಿರುವ ಮಹಿಳೆಯರಿಗೆ ವರ್ಷಕ್ಕೆ ಒಟ್ಟಾರೆ 10 ಮಿಲಿಯನ್ ಸ್ಯಾನಿಟರಿ ಪ್ಯಾಡ್ ಗಳ ಅವಶ್ಯಕತೆಯಿದೆ.