ದೀಪಾವಳಿ ಸಂದರ್ಭದಲ್ಲಿಯೂ ಕುಟುಂಬಸ್ಥರಿಂದ ದೂರವಿದ್ದು, ದೇಶ ಕಾಯುವ ಸೈನಿಕರಿಗೆ ಭಾರತ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಪರಾನುಭೂತಿ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಕೊಹ್ಲಿ ಸೈನಿಕರಿಗೆ ದೀಪಾವಳಿಯ ಶುಭ ಕೋರಿದ್ದಾರೆ.
ದೇಶಕಾಯುವ ಸೈನಿಕರಿಗೆ ದೀಪಾವಳಿಯ ಶುಭ ಕೋರುತ್ತೇನೆ. ಕುಟುಂಬದಿಂದ ದೂರ ಉಳಿಯುವುದು ಎಷ್ಟು ಕಷ್ಟ ಎಂಬುದು ಗೊತ್ತು. ದೇಶದ ರಕ್ಷಣೆ ಮಾಡ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ. ನನ್ನ ಸಹೋದರರೇ ವಿಶ್ವಾಸವಿಡಿ, ನಾನು ಹಾಗೂ ನಮ್ಮ ದೇಶದ ಎಲ್ಲ ಜನರೂ ನಿಮ್ಮ ಜೊತೆಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ ಕೊಹ್ಲಿ.
ಹಾಗೆ ಸೈನಿಕರನ್ನು ಗೌರವಿಸುವಂತೆ ಕೊಹ್ಲಿ, ದೇಶದ ಜನತೆಗೆ ಮನವಿ ಮಾಡಿದ್ದಾರೆ. ಎಲ್ಲಿ ಸೈನಿಕರು ಕಂಡರೂ ಅವರಿಗೊಂದು ಸಲಾಮ್ ಮಾಡಿ. ಅವರು ನಮ್ಮ ರಕ್ಷಣೆ ಮಾಡ್ತಿರುವುದರಿಂದ ನಾವು ಶಾಂತಿಪೂರ್ವಕವಾಗಿ ಹಬ್ಬದ ಲಾಭ ಪಡೆಯುತ್ತೇವೆ. ಜೈ ಹಿಂದ್ ಎಂದಿದ್ದಾರೆ ಕೊಹ್ಲಿ.