ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಶ್ರೀಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ಮನೆಗಳನ್ನು ಸ್ವಚ್ಛಗೊಳಿಸಿ, ಸುಂದರವಾಗಿ ಅಲಂಕಾರ ಮಾಡಲಾಗ್ತಾ ಇದೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಹೂ, ಸಿಹಿ ತಿಂಡಿಗಳು ರಾರಾಜಿಸ್ತಾ ಇವೆ.
ಹಬ್ಬದ ಹಿನ್ನೆಲೆಯಲ್ಲಿ ದೀಪಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಪಟಾಕಿ ಸಿಡಿಸಿ ಸಂಭ್ರಮಿಸಲು ಮಕ್ಕಳು ಸಿದ್ಧರಾಗಿದ್ದರೆ ಪೂಜೆ ಪುನಸ್ಕಾರದ ತಯಾರಿಯಲ್ಲಿ ಹಿರಿಯರು ನಿರತರಾಗಿದ್ದಾರೆ. ಬಾಲಿವುಡ್ ಬೆಡಗಿ ಪೂನಂ ಪಾಂಡೆ ಕೂಡ ಜೋರಾಗಿ ಹಬ್ಬ ಮಾಡುವಂತೆ ಕಾಣ್ತಾ ಇದೆ.
ಪೂನಂ ಪಾಂಡೆ ಹಬ್ಬದ ನಿಮಿತ್ತ ಫೋಟೋ ಶೂಟ್ ಮಾಡಿಸಿದ್ದಾಳೆ. ಅಪರೂಪಕ್ಕೆ ಸುಂದರ ಡ್ರೆಸ್ ಧರಿಸಿರುವ ಪಾಂಡೆ ಹ್ಯಾಪಿ ದೀಪಾವಳಿ ಎಂದು ತನ್ನ ಅಭಿಮಾನಿಗಳಿಗೆ ಶುಭ ಕೋರಿದ್ದಾಳೆ.