ಮುದ್ದು ಮುದ್ದಾಗಿರೋ ಈ ಮಗು ಅಮೆರಿಕದ ಮೇರಿಲ್ಯಾಂಡ್ ನಿವಾಸಿ. ಪುಟಾಣಿ ಎಲ್ಲಾ, ಯಾವಾಗ್ಲೂ ಖುಷಿ ಖುಷಿಯಾಗಿ ಆಟವಾಡಿಕೊಂಡಿರ್ತಾಳೆ. ಆದ್ರೆ ಅಪ್ಪ-ಅಮ್ಮ ಪರಸ್ಪರ ಚುಂಬಿಸಿದ್ರೆ ಎಲ್ಲಾಗೆ ಇಷ್ಟವಾಗೋದಿಲ್ಲ. ಅದನ್ನು ನೋಡಿದಾಗಲೆಲ್ಲ ಈ ಕಂದಮ್ಮ ಮುಖ ಗಂಟಿಕ್ಕಿಕೊಂಡು ಅಳೋಕೆ ಶುರು ಮಾಡ್ತಾಳೆ.
ಎಲ್ಲಾಳ ರಿಯಾಕ್ಷನ್ ಹೇಗಿರತ್ತೆ ಅನ್ನೋದನ್ನು ಖುದ್ದು ಅವಳ ತಾಯಿ ಕ್ರಿಸ್ಸಿ ಹನ್ನೆಕೆನ್ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ. ತಂದೆ-ತಾಯಿ ಚುಂಬಿಸೋದನ್ನು ನೋಡಿದಾಗಲೆಲ್ಲ ಅಳುವ ಎಲ್ಲಾ, ಅವರು ಸುಮ್ಮನಾದ ತಕ್ಷಣ ನಗಲು ಶುರು ಮಾಡ್ತಾಳೆ.
ಮತ್ತೆ ಅವರು ಕಿಸ್ ಮಾಡಿಕೊಂಡ್ರೆ ಆ ಕ್ಷಣದಲ್ಲಿ ಕಣ್ಣೀರಾಗ್ತಾಳೆ. ಎಲ್ಲಾಳ ಈ ಅದ್ಭುತ ಪ್ರತಿಕ್ರಿಯೆಯ ಕ್ಯೂಟ್ ವಿಡಿಯೋವನ್ನು ಫೇಸ್ ಬುಕ್ ನಲ್ಲಿ 14 ಮಿಲಿಯನ್ ಜನರು ವೀಕ್ಷಿಸಿದ್ದಾರೆ, 1 ಲಕ್ಷ ಕಮೆಂಟ್ಸ್ ಬಂದಿವೆ, 1.3 ಲಕ್ಷ ಮಂದಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನೀವು ಕೂಡ ಆ ಮುದ್ದು ಕೂಸಿನ ವಿಡಿಯೋವನ್ನೊಮ್ಮೆ ನೋಡಿ.