ಭಯೋತ್ಪಾದಕ ಜನ್ಮ ಭೂಮಿ ಪಾಕಿಸ್ತಾನದ ಬಣ್ಣ ಮತ್ತೆ ಬಯಲಾಗಿದೆ. ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟುಹಾಕ್ತಿದೆ ಎಂಬುದಕ್ಕೆ ಇನ್ನಷ್ಟು ಸಾಕ್ಷಿಗಳು ಸಿಕ್ಕಿವೆ.
ಪಾಕಿಸ್ತಾನದ ಮದರಸಾಗಳಲ್ಲಿ ಮಕ್ಕಳಿಗೆ ಭಯೋತ್ಪಾದನೆಯ ಪಾಠ ಹೇಳಲಾಗ್ತಾ ಇದೆ. ಸಿಂಧ್ ಪ್ರಾಂತ್ಯದ 93 ಮದರಸಾಗಳಲ್ಲಿ ಭಯೋತ್ಪಾದಕರ ಕಥೆಗಳನ್ನು ಪಾಠದ ರೂಪದಲ್ಲಿ ಹೇಳಲಾಗ್ತಿದೆ.
ಬಹಿರಂಗವಾಗಿ ಮಕ್ಕಳ ತಲೆಯಲ್ಲಿ ಈ ವಿಷಯವನ್ನು ತುಂಬಲಾಗ್ತಾ ಇದೆ. ಇದು ಸ್ಥಳೀಯ ಪೊಲೀಸ್, ಆಡಳಿತ ಮಂಡಳಿ ಹಾಗೂ ಮಿಲಿಟರಿ ಅಧಿಕಾರಿಗಳಿಗೆ ತಿಳಿದಿದೆ. ಆದ್ರೆ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.
ಉಗ್ರಗಾಮಿಗಳಿಗೆ ಆಶ್ರಯ ನೀಡಲು ಹಾಗೂ ಭಯೋತ್ಪಾದಕ ಪಾಠಗಳನ್ನು ಮಕ್ಕಳ ತಲೆಯಲ್ಲಿ ತುಂಬುತ್ತಿರುವ ಜನರಿಗೆ, ಸೇನೆ ಜೊತೆ ಐಎಸ್ಐ ಬೆಂಬಲ ನೀಡುತ್ತಿದೆ ಎನ್ನಲಾಗ್ತಾ ಇದೆ.