ನೌಕರರ ಭವಿಷ್ಯ ನಿಧಿಯಿಂದ ಹಣ ಪಡೆಯಲು ಇನ್ಮುಂದೆ ಪಿಎಫ್ ಕಚೇರಿಗೆ ಅಲೆಯಬೇಕಾಗಿಲ್ಲ. ಮನೆಯಲ್ಲಿ ಕುಳಿತು ಪಿಎಫ್ ಹಣ ಪಡೆಯಬಹುದು. ಆನ್ಲೈನ್ ನಲ್ಲಿ ಎಲ್ಲ ಮಾಹಿತಿಗಳು ಹಾಗೂ ಸೌಲಭ್ಯಗಳು ಸಿಗಲಿವೆ. ನವೆಂಬರ್ 1ರಿಂದ ಎಲ್ಲ ದಾಖಲೆಗಳು ಆನ್ಲೈನ್ ನಲ್ಲಿ ಲಭ್ಯವಾಗಲಿವೆ. ಭೂಪಾಲ್ ಸೇರಿ 12 ಪಿಎಫ್ ಕಚೇರಿಗಳಲ್ಲಿ ಈ ಯೋಜನೆ ಶುರುವಾಗಲಿದೆ.
ನೌಕರರ ದಾಖಲಾತಿಗಳು ಸೆಂಟ್ರಲ್ ಸರ್ವರ್ ಸೇರಲಿವೆ. ನಂತ್ರ ಪಿಎಫ್ ಖಾತೆಯಿಂದ ಮುಂಗಡ ಹಣ ಪಡೆಯುವುದು ಸುಲಭವಾಗಲಿದೆ. ಜೊತೆಗೆ ವರ್ಗಾವಣೆ ಕೂಡ ಸುಲಭವಾಗಲಿದೆ. ಎಲ್ಲ ನೌಕರರ ದಾಖಲೆ ಒಂದೇ ಕಡೆ ಲಭ್ಯವಾಗಲಿದೆ. ಹಾಗಾಗಿ ವರ್ಗಾವಣೆ ವೇಳೆ ಬೇರೆ ಬೇರೆ ಪಿಎಫ್ ಸಂಖ್ಯೆ ನೀಡುವ ಅಗತ್ಯವಿರುವುದಿಲ್ಲ. ಇದರಿಂದ ನೌಕರರು ಎದುರಿಸುತ್ತಿದ್ದ ಗೊಂದಲಗಳಿಗೆ ಮುಕ್ತಿ ಸಿಗಲಿದೆ. ಯುನಿವರ್ಸಲ್ ಖಾತೆ ಸಂಖ್ಯೆಯನ್ನು ಆಧಾರ್ ಕಾರ್ಡ್ ಜೊತೆ ಸೇರಿಸಲಾಗ್ತಾ ಇದೆ. ದೇಶದ ಯಾವುದೇ ಮೂಲೆಯಲ್ಲಿ ನೌಕರ ಕೆಲಸ ಮಾಡ್ತಿದ್ದರೂ ಆತನ ಹಕ್ಕನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.
ಭೂಪಾಲ್ ನಲ್ಲಿ ನೌಕರರ ದಾಖಲಾತಿಗಳನ್ನು ಸೆಂಟ್ರಲ್ ಸರ್ವರ್ ಗೆ ಸೇರಿಸಲಾಗ್ತಾ ಇದೆ. ನವೆಂಬರ್ ನಿಂದ ಎರಡು ತಿಂಗಳುಗಳ ಕಾಲ ಮೇಲ್ವಿಚಾರಣೆ ನಡೆಯಲಿದೆ. ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷಕ್ಕೆ 126 ಪಿಎಫ್ ಕಾರ್ಯಾಲಯಗಳನ್ನು ಸೆಂಟ್ರಲ್ ಸರ್ವರ್ ಗೆ ಸೇರಿಸುವ ಕೆಲಸ ಶುರುವಾಗಲಿದೆ.