ಕುಡಿಯೋದ್ರಲ್ಲಿ ಪುರುಷರೇ ಮುಂದು ಅನ್ನೋ ವಾದ ಮೊದಲಿನಿಂದ್ಲೂ ಇದೆ. ಮದ್ಯವ್ಯಸನದಿಂದ ಬರುವ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಅವರನ್ನೇ ಕಾಡುತ್ತವೆ ಎನ್ನಲಾಗ್ತಾ ಇತ್ತು.
ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ, ಎಣ್ಣೆ ಹೊಡೆಯೋದ್ರಲ್ಲೂ ಮಹಿಳೆಯರು ಪುರುಷರಿಗೆ ಹೆಚ್ಚು ಕಡಿಮೆ ಸರಿಸಮಾನರು. ಈಗ ಸ್ತ್ರೀಯರು ಕೂಡ ಹೆಚ್ಚಾಗಿ ಮದ್ಯ ಸೇವನೆಯಲ್ಲಿ ತೊಡಗಿಕೊಳ್ತಿದ್ದಾರಂತೆ.
68 ಅಂತರಾಷ್ಟ್ರೀಯ ಅಧ್ಯಯನಗಳ ಅಂಕಿ- ಅಂಶಗಳ ಪ್ರಕಾರ ಇದರಿಂದಾಗಿ ಮಹಿಳೆಯರಲ್ಲೂ ಪುರುಷರಷ್ಟೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಸ್ಯಾಂಟಿಯಾಗೊ ಕೆನ್ಯೊನ್ ಕಾಲೇಜು ಈ ವರದಿಯನ್ನು ಪ್ರಕಟಿಸಿದ್ದು, ಮದ್ಯ ವ್ಯಸನದಿಂದಾಗಿ ಮಹಿಳೆಯರಲ್ಲಿ ದುರ್ಬಲತೆ ಮತ್ತು ಬಂಜೆತನ ಹೆಚ್ಚುತ್ತಿದೆ. ಸಂತಾನೋತ್ಪತ್ತಿ ಅಂಗಗಳು ದುರ್ಬಲವಾಗುತ್ತಿವೆ. ಅಷ್ಟೇ ಅಲ್ಲ ಕುಡಿಯೋ ಚಟವಿದ್ದವರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಕೂಡ ಹೆಚ್ಚಾಗಿರುತ್ತದೆ ಎಂದಿದೆ.