Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

921 ರೂಪಾಯಿಯಲ್ಲಿ ವಿಮಾನ ಪ್ರಯಾಣ..!

$
0
0
921 ರೂಪಾಯಿಯಲ್ಲಿ ವಿಮಾನ ಪ್ರಯಾಣ..!

ಜೆಟ್ ಏರ್ವೆಸ್ ವಿಮಾನ ಸಂಸ್ಥೆ, ದೀಪಾವಳಿ ಹಬ್ಬದ ಕೊಡುಗೆಯಾಗಿ ಆಯ್ದ ನಗರಗಳ ಪ್ರಯಾಣಕ್ಕೆ 921 ರೂ. ಟಿಕೇಟ್ ದರ ನಿಗದಿಪಡಿಸಿದ್ದು, ಅಕ್ಟೋಬರ್ 30 ರವರೆಗೆ ಈ ಸೌಲಭ್ಯ ದೊರೆಯಲಿದೆ.

“Deal Wali Diwali” ಆಫರ್ ನಡಿ ಟಿಕೇಟ್ ಬುಕ್ ಮಾಡಿದವರು ಬುಕ್ ಮಾಡಿದ ದಿನದಿಂದ 15 ದಿನಗಳೊಳಗಾಗಿ ಪ್ರಯಾಣಿಸುವ ಸೌಲಭ್ಯವನ್ನು ಪಡೆಯಬಹುದಾಗಿದೆ. ಚೆನ್ನೈ- ಕೊಯಮತ್ತೂರು ಮಾರ್ಗಕ್ಕೆ 921 ರೂ. ಟಿಕೇಟ್ ದರ ನಿಗದಿಪಡಿಸಲಾಗಿದ್ದು, ಇದರಲ್ಲಿ ಎಲ್ಲ ವೆಚ್ಚಗಳು ಸೇರಿವೆ ಎನ್ನಲಾಗಿದೆ.

“Deal Wali Diwali” ಆಫರ್ ನಡಿ ಟಿಕೇಟ್ ಬುಕ್ ಮಾಡಿದವರಿಗೆ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಕ್ಕೆ ಅವಕಾಶ ಲಭ್ಯವಾಗಲಿದ್ದು, ಈ ಆಫರ್ ನಡಿ ಎಷ್ಟು ಸೀಟುಗಳ ನಿಗದಿಪಡಿಸಲಾಗಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಆದರೆ ಮೊದಲು ಬುಕ್ ಮಾಡಿದವರಿಗೆ ಆದ್ಯತೆ ಎಂದು ತಿಳಿಸಲಾಗಿದೆ.


Viewing all articles
Browse latest Browse all 103032

Trending Articles