ಥೈಲ್ಯಾಂಡ್ ನ ರೆಡ್ ಲೈಟ್ ಬಾರ್ 10 ದಿನಗಳ ನಂತ್ರ ಮತ್ತೆ ತನ್ನ ಕೆಲಸ ಶುರುಮಾಡಿದೆ. ಅಕ್ಟೋಬರ್ 13ರಂದು ಥೈಲ್ಯಾಂಡ್ ರಾಜ ಭೂಮಿಬೋಲ್ ಮೃತಪಟ್ಟಿದ್ದರು. ಶೋಕಾಚರಣೆಯಲ್ಲಿದ್ದ ಜನರು ತಮ್ಮ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿದ್ದರು. ಹಾಗಾಗಿ ಬಾರ್ ಗಳು ತೆರೆದಿರಲಿಲ್ಲ.
10 ದಿನಗಳ ನಂತ್ರ ರೆಡ್ ಲೈಟ್ ಏರಿಯಾದಲ್ಲಿ ಹುಡುಗಿಯರು ಕಾಣಿಸಿಕೊಂಡಿದ್ದಾರೆ. ಸೆಕ್ಸಿ ಡ್ರೆಸ್ ನಲ್ಲಿ ಮಿಂಚುತ್ತಿದ್ದ ಹುಡುಗಿಯರು ಕಪ್ಪು ಬಟ್ಟೆ ಧರಿಸಿ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದಾರೆ. ರಾಜ ಹಾಗೂ ದೇಶ ಎರಡನ್ನೂ ನಾವು ಪ್ರೀತಿಸ್ತೇವೆ. ಆದ್ರೆ ಹೊಟ್ಟೆಪಾಡಿಗೆ ಈ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹುಡುಗಿಯರು ಹೇಳಿದ್ದಾರೆ.
ಸೋಮವಾರದಿಂದ ರೆಡ್ ಲೈಟ್ ಏರಿಯಾ ರೀ ಓಪನ್ ಆಗಿದ್ದು, ಗ್ರಾಹಕರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ. ಬ್ಯಾಂಕಾಕ್ ನಲ್ಲಿ ಕೂಡ ಬಾರ್ ಹಾಗೂ ಕ್ಲಬ್ ಗಳು ನಿಧಾನವಾಗಿ ಬಾಗಿಲು ತೆರೆಯುತ್ತಿವೆ. ಸಣ್ಣದಾಗಿ ಮ್ಯೂಜಿಕ್ ಹಾಕಲಾಗಿದ್ದು, ಬಾರ್ ಒಳಗೆ ನೃತ್ಯ ಮಾಡಲು ಅವಕಾಶ ನೀಡಲಾಗಿದೆ. ಬೆಳಗಿನ ಜಾವ 2-3 ಗಂಟೆಯವರೆಗೆ ತೆರೆದಿರ್ತಾ ಇದ್ದ ಬಾರ್ ಗಳು 12 ಗಂಟೆಗೆ ಬಾಗಿಲು ಮುಚ್ಚುತ್ತಿವೆ.