ದೀಪಾವಳಿಗೆ ದೇಶದಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ.ಮಾರುಕಟ್ಟೆಗೆ ದೀಪಗಳ ಜೊತೆ ಸಿಹಿ ತಿಂಡಿಗಳು ಲಗ್ಗೆ ಇಟ್ಟಿವೆ. ಭಾರತ ಸೇರಿದಂತೆ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಪತಂಜಲಿ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ದೀಪಾವಳಿಯಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಾಬಾ ರಾಮ್ ದೇವ್ ಭರ್ಜರಿ ತಯಾರಿಯೊಂದಿಗೆ ಸಿದ್ಧವಾಗಿ ನಿಂತಿದ್ದಾರೆ.
ಪತಂಜಲಿ ಮಿಠಾಯಿ ಜೊತೆ ದೀಪಾವಳಿಯಂದು ಹರ್ಬಲ್ ಉತ್ಪನ್ನ ಕೂಡ ಗ್ರಾಹಕರ ಕೈ ಸೇರ್ತಾ ಇದೆ. ಕೆಲವು ಜ್ಯೂಸ್, ಜೆಲ್ಲಿ ಹಾಗೂ ಕ್ಯಾಂಡಿ ಮಾರುಕಟ್ಟೆ ಪ್ರವೇಶ ಮಾಡಿದೆ. ದೀಪಾವಳಿಗೆ ಪತಂಜಲಿ ಸೋನ್ ಪಾಪಡಿ ಹಾಗೂ ರಸಗುಲ್ಲೆ ದೇಶದಾದ್ಯಂತ ದೊರೆಯಲಿದೆ. ಭಾರತೀಯ ಮಾರುಕಟ್ಟೆಯನ್ನು ಬಾಬಾ ರಾಮದೇವ್ ನಿಧಾನವಾಗಿ ಆಕ್ರಮಿಸಿಕೊಳ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುವ ಸಿದ್ಧತೆ ನಡೆಸಿದ್ದಾರೆ. ಹಾಲು, ಗೊಬ್ಬರ, ಬಟ್ಟೆ ಹೀಗೆ ಎಲ್ಲ ಕ್ಷೇತ್ರಗಳಿಗೂ ಪತಂಜಲಿ ಕಾಲಿಡ್ತಾ ಇದೆ.
ದೀಪಾವಳಿಯಂದು ಭಾರತೀಯರು ಪೆಪ್ಸಿ, ಕೋಕಾಕೋಲಾ ಬದಲು ದೇಶೀಯ ಜ್ಯೂಸ್ ಸೇವನೆ ಮಾಡಲಿ ಎಂಬುದು ಬಾಬಾ ಆಶಯ. ಚವನ್ ಫ್ರೆಶ್, ಅಮೃತಪ್ರೆಶ್, ಮುಸ್ಲಿಪಾಕ್, ಅಮೃತ ರಾಸಾಯನ್ ಸೇರಿದಂತೆ ಅನೇಕ ಉತ್ಪನ್ನಗಳನ್ನು ದೇಶವೊಂದೆ ಅಲ್ಲ ವಿದೇಶಿ ಮಾರುಕಟ್ಟೆಗೂ ಲಭ್ಯಗೊಳಿಸಿದ್ದಾರೆ ಬಾಬಾ ರಾಮದೇವ್. ಹಬ್ಬಕ್ಕಾಗಿ ಆಮ್ಲ ಕ್ಯಾಂಡಿ, ಪಪ್ಪಾಯಿ ಕ್ಯಾಂಡಿ, ಕಾರ್ನ್ ಪ್ಲೆಕ್ಸ್, ಅಲೋವೇರಾ ರಸ ಸೇರಿದಂತೆ ಅನೇಕ ಉತ್ಪನ್ನಗಳು ಹೊಸದಾಗಿ ಮಾರುಕಟ್ಟೆಗೆ ಬಂದಿವೆ.