ಬಾಲಿವುಡ್ ನಟ ಸುಶಾಂತ್ ಸಿಂಗ್ ಹಾಗೂ ಅಂಕಿತಾ ಲೋಖಂಡ್ ದೂರವಾಗ್ತಿದ್ದಂತೆ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಆದ್ರೆ ರಾಬ್ತಾ ಚಿತ್ರಕ್ಕೂ ಮುನ್ನ ಒಂಟಿಯಾಗಿದ್ದ ಸುಶಾಂತ್ ನಂತ್ರ ಬಾಲಿವುಡ್ ಮಂದಿಗೆ ಆಹಾರವಾಗಿದ್ದರು. ಸುಶಾಂತ್ ಬಾಲಿವುಡ್ ನಟಿ ಕೃತಿ ಸನೋನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆಂಬ ಬಗ್ಗೆ ಆಗಾಗ ಸುದ್ದಿ ಕೇಳಿ ಬರ್ತಾ ಇತ್ತು.
ಸುಶಾಂತ್ ಹಾಗೂ ಕೃತಿ ನಡುವೆ ಪ್ರೀತಿ ಶುರುವಾಗಿದೆ ಎಂಬ ಅನುಮಾನಕ್ಕೆ ಸಾಕಷ್ಟು ಸಾಕ್ಷಿಗಳು ಸಿಗ್ತಾ ಇವೆ. ಈ ಹಿಂದೆ ಇಬ್ಬರೂ ಮಾರಿಷಸ್ ಗೆ ಒಂದೇ ಪ್ಲೈಟ್ ನಲ್ಲಿ ಹಾರಿದ್ದರು. ಚಿತ್ರೀಕರಣದ ವೇಳೆ ಸಾಕಷ್ಟು ಹತ್ತಿರವಾಗಿದ್ದ ಜೋಡಿ ಒಂದೇ ಪ್ಲೇಟ್ ನಲ್ಲಿ ಊಟ ಮಾಡೋವಷ್ಟು ಆಪ್ತರಾಗಿದ್ದಾರೆ. ತಮ್ಮಿಬ್ಬರ ಸಂಬಂಧದ ಬಗ್ಗೆ ಇಬ್ಬರೂ ಗಂಭೀರವಾಗಿದ್ದಾರೆನ್ನಲಾಗಿದೆ. ಸದ್ಯದಲ್ಲಿಯೇ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆಂದೂ ಮೂಲಗಳು ಹೇಳ್ತಾ ಇವೆ.
ಅಂಕಿತಾ ಜೊತೆ ಸಂಬಂಧ ಮುರಿದು ಬಿದ್ದ ಮೇಲೆ ಸಾಮಾಜಿಕ ಜಾಲತಾಣದಿಂದ ಹೊರಬಿದ್ದಿದ್ದ ಸುಶಾಂತ್ ರಬ್ತಾ ಕೊನೆ ಶೂಟಿಂಗ್ ವೇಳೆ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದ. ಕೃತಿ ಜೊತೆ ಮೊದಲ ಫೋಟೋ ಪೋಸ್ಟ್ ಮಾಡಿದ್ದ.